ಕೊರೊನಾ ಅವಧಿಯಲ್ಲಿ ವಿಮಾ ಅರಿವು ಹೆಚ್ಚಳ

ಬೆಂಗಳೂರು, ಏ. ೬- ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಜನರಲ್ಲಿ ವಿಮಾ ಸೌಲಭ್ಯದ ಜಾಗೃತಿ ಕುರಿತು ಅರಿವು ಹೆಚ್ಚಳವಾಗಿದೆ.

‘ಕೋವಿಡ್-೧೯’ ಪಿಡುಗಿನ ಸಂದರ್ಭದಲ್ಲಿ ಜೀವ ವಿಮೆ, ಆರೋಗ್ಯ ವಿಮೆ ಸೌಲಭ್ಯ ಪಡೆಯುವುದರ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿದೆ. ವಿಮೆ ಉದ್ದಿಮೆಯು ಡಿಜಿಟಲ್ ಸಾಧನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವುದಕ್ಕೂ ಇದು ಗಮನಾರ್ಹವಾಗಿ ಪ್ರೇರಣೆ ನೀಡಿದೆ

ಡಿಜಿಟಲ್ ಯುಗದ ಆರಂಭದಲ್ಲಿ ಜೀವ ವಿಮೆ ಕಂಪನಿಗಳು ತಮ್ಮಷ್ಟಕ್ಕೆ ತಾವೇ ಮರು ವಿಮರ್ಶೆಗೆ ಒಳಪಟ್ಟಿವೆ. ವಹಿವಾಟಿನ ಪ್ರಕ್ರಿಯೆಯನ್ನು ಹೆಚ್ಚಿನ ಮಟ್ಟದಲ್ಲಿ ಗ್ರಾಹಕ ಸ್ನೇಹಿಯನ್ನಾಗಿಸಲು ಕ್ರಮಗಳನ್ನು ಕೈಗೊಂಡಿವೆ. ಕೃತಕ ಬುದ್ಧಿಮತ್ತೆಯಿಂದ ಹಿಡಿದು, ಚಾಟ್ಬೋಟ್ಸ್, ವಾಟ್ಸ್‌ಆ?ಯಪ್ ಆಧಾರಿತ ಸೇವೆಗಳನ್ನೂ ಅಳವಡಿಸಿಕೊಂಡಿವೆ. ಗ್ರಾಹಕರಿಗೆ ಒದಗಿಸುವ ಸೇವೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹಲವಾರು ಪರಿವರ್ತನೆಗಳೂ ನಡೆದಿವೆ.

ವಿಮೆ ಪರಿಹಾರ ಮೊತ್ತದ ಪಾವತಿ ಇತ್ಯರ್ಥಪಡಿಸುವುದು ಅಥವಾ ಪಾಲಿಸಿದಾರರಿಗೆ ಪರಿಹಾರ ಧನ ವಿತರಿಸುವುದರಲ್ಲಿ, ಗ್ರಾಹಕರ ಕೋರಿಕೆಗಳನ್ನು ಈಡೇರಿಸಲು ತೆಗೆದುಕೊಳ್ಳುವ ಸಮಯ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಎಕ್ಸೈಡ್ ಲೈಫ್ ವಿನೆಯ ಸಿಒಒ ಅಶ್ವಿನ್ ಬಿ ಹೇಳಿದ್ದಾರೆ

ಪರಿಹಾರ ಪಡೆಯಬೇಕಾದ ಸಂದರ್ಭದಲ್ಲಿ ಅದರಲ್ಲೂ ಇಂತಹ ಸಂಕಷ್ಟದ ದಿನಗಳಲ್ಲ್ಲಿ ತಮ್ಮ ಗ್ರಾಹಕರು ತಮ್ಮನ್ನೇ ಹೆಚ್ಚಾಗಿ ಅವಲಂಬಿಸಿರುವುದು ವಿಮೆ ಕಂಪನಿಗಳಿಗೆ ಹೆಚ್ಚು ಮನವರಿಕೆಯಾಗಿದೆ. ಬಹುತೇಕ ವಿಮೆ ಕಂಪನಿಗಳು, ವಿಮೆ ಪರಿಹಾರ ಕೋರಿಕೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ ಪರಿಹಾರ ಮೊತ್ತ ಪಾವತಿಸುವುದಕ್ಕೆ ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿವೆ.