ಕೊರೊನಾ ಅಲೆ ಮನೆಯತ್ತ ವಸತಿ ವಿದ್ಯಾರ್ಥಿಗಳ ಹೆಜ್ಜೆ

ಲಕ್ಷ್ಮೇಶ್ವರ,ಏ7: ಹಳ್ಳಿಯಿಂದ ಹಿಡಿದು ದಿಲ್ಲಿಯಿವರೆಗೂ ಕೊರೋನಾದ ಎರಡನೇಯ ಅಲೆ ಅಪ್ಪಳಿಸಿದ್ದು ಕೇವಲ ಒಂದು ತಿಂಗಳಲ್ಲಿಯೇ ತೆರೆದ ಶಾಲೆಗಳು ಮತ್ತೆ ಮುಚ್ಚಿದ್ದು 6-9 ವರ್ಗದವರೆಗಿನ ಎಲ್ಲಾ ಶಾಲೆಗಳು ವಸತಿ ನಿಲಯಗಳು ಮುಚ್ಚಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮತ್ತೆ ಪಾಲಕರು ಮಕ್ಕಳನ್ನು ತಮ್ಮ ತಮ್ಮ ಮನೆಗಳಿಗೆ ಕರೆದೊಯ್ಯುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಪಟ್ಟಣದ ಬಿ.ಡಿ. ತಟ್ಟಿ ಸ್ಮಾರಕ ವಿಕಲ ಚೇತನರ ವಿಶೇಷ ಶಾಲೆಯಲ್ಲಿ ಒಟ್ಟು 170 ಮಕ್ಕಳಲ್ಲಿ 6 ನೇ ವರ್ಗದಿಂದ 9 ವರ್ಗದವರೆಗಿನ ಒಟ್ಟು 86 ಮಕ್ಕಳಲ್ಲಿ ಮಾರ್ಚ್ 6 ರಿಂದ ಶಾಲೆಗಳಿಗೆ ಬರಲಾರಂಭಿಸಿದರು.
ವಸತಿ ನಿಲಯದ ಈ ಶಾಲೆಯಲ್ಲಿ 44 ವಿದ್ಯಾರ್ಥಿಗಳು ಕೇವಲ ಒಂದು ತಿಂಗಳ ಹಿಂದೆಯಷ್ಟೇ ಗಂಟುಮೂಟೆ ಕಟ್ಟಿಕೊಂಡು ಪಾಲಕರ ಸಮೇತ ಬಂದಿದ್ದ ಮಕ್ಕಳಿಗೆ ಮತ್ತೆ ಬರಸಿಡಿಲಿನಂತೆ ಕೊರೋನಾದ ಎರಡನೆಯ ಅಲೆಯ ಭೀತಿಯಿಂದ ಸರಕಾರ ರಾಜ್ಯಾದ್ಯಂತ ಆರರಿಂದ ಒಂಬತ್ತನೇ ವರ್ಗದ ಶಾಲೆಗಳು ಪರಿಸ್ಥಿತಿ ಹತೋಟಿಗೆ ಬರುವವರೆಗೆ 6ರಿಂದ 9 ನೇಯ ತರಗತಿ ಬಂದ್ ಮಾಡಿ ಆದೇಶ ನೀಡಿದ್ದು ಆಡಳಿತ ಮಂಡಳಿಗೆ ಪಾಲಕರಿಗೆ ಸರಕಾರದ ಕಣ್ಣಾಮುಚ್ಚಾಲೆ ಆಟದಿಂದ ರೋಸಿ ಹೋಗಿದ್ದಾರೆ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ವಿದ್ಯಾರ್ಥಿಗಳ ಮೇಲೆಯೇ ಗುರಿ ನೆಟ್ಟಿರುವ ಕೊರೋನ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ಕಾಲೇಜುಗಳು ಪರೀಕ್ಷೆಗಳನ್ನು ಮುಂದೂಡುವುದು ಸೂಕ್ತ ಎಂಬುದು ಶಿಕ್ಷಣ ತಜ್ಞರ ಹಾಗೂ ಕೊರೊನಾ ನಿಯಂತ್ರಣ ಸಲಹಾ ಮಂಡಳಿಯ ಅಭಿಪ್ರಾಯವಾಗಿದೆ.
ಸರ್ಕಾರ ಒಂದರಿಂದ ಐದನೇಯ ತರಗತಿಯ ವರ್ಗಗಳನ್ನು ಆರಂಭಿಸದಿರುವುದು ಸಮಾಧಾನದ ಸಂಗತಿಯಾಗಿದ್ದು, ಹೆಚ್ಚಿನ ಅನಾಹುತಕ್ಕೆ ಎಡೆ ಮಾಡಿಕೊಟ್ಟಿಲ್ಲ. ಸರ್ಕಾರ ಜೀವದ ಜೊತೆ ಚೆಲ್ಲಾಟ ಆಡುವುದುಕಿಂತಲ್ಲೂ ಸರಳ ಮಾರ್ಗಗಳನ್ನು ಕಂಡು ಹಿಡಿದು ವಿದ್ಯಾರ್ಥಿಗಳ ಹಿತರಕ್ಷಣೆಗೆ ಮುಂದಾಗಬೇಕು ಅಷ್ಟೇ.