ಕೊರೊನಾ ಅಲೆ-ಬಡವರಿಗೆ ದಿನಸಿ ವಿತರಿಸಲು ಸಲಹೆ

ಕೋಲಾರ, ಏ.೨೪: ವಿಶ್ವದಲ್ಲಿ ಕರೋನಾ ಮಹಾಮಾರಿ ೨ನೇ ಅಲೆಯ ಭೀತಿಯಲ್ಲಿರುವ ಜನತೆಗೆ ಸರಳ ರೀತಿಯ ಜನ್ಮ ದಿನಾಚರಣೆಗಳ ಆಚರಣೆಯಿಂದ ಬಡವರಿಗೆ, ನಿರ್ಗತಿಕರಿಗೆ ದಿನಸಿ ಕಿಟ್‌ಗಳ ವಿತರಣೆಯಿಂದ ಶ್ರಮಿಕ ಜೀವಿಗಳಿಗೆ ಸಹಕಾರಿಯಾಗುತ್ತಿದೆ ಎಂದು ಮನ್ವಂತರ ಜನ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ ಅನಂತರಾಮ್ ಹೇಳಿದರು.
ನಗರದ ಎ.ಪಿ.ಎಂ.ಸಿ ಪ್ರಾಂಗಣದಲ್ಲಿರುವ ಸಪ್ತಗಿರಿ ಹಣ್ಣು ಮತ್ತು ತರಕಾರಿ ಕಮೀಷನ್ ಮಂಡಿ ಮುಂಭಾಗ ಪುಟ್ಟಪರ್ತಿ ಸತ್ಯಸಾಯಿಬಾಬಾ ರವರ ೧೦ನೇ ಆರಾಧನಾ ಮಹೋತ್ಸವ ಅಂಗವಾಗಿ ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ವತಿಯಿಂದ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಸಮಾಜದ ಎಲ್ಲಾ ಸಮುದಾಯದ ಜಯಂತಿಗಳನ್ನು ಸರಳವಾಗಿ ಆಚರಿಸಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಕಷ್ಟಗಳಿಗೆ ಸ್ಪಂದಿಸುವಂತಹ ಕಾರ್ಯವನ್ನು ಎಲ್ಲರೂ ಮೈಗೂಡಿಸಿಕೊಂಡರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ಸದಸ್ಯ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ದಿನೇದಿನೇ ಕೊರೋನಾ ಮಹಾಮಾರಿ ಸ್ಟಹಾಸ ಹೆಚ್ಚುತ್ತಿದ್ದು, ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ನಿತ್ಯ ಅನುಸರಿಸುವ ಕಾಯಕವಾಗಿ ಕೊರೋನಾ ಮುಕ್ತ ಜಿಲ್ಲೆಗೆ ಪಣ ತಡೋಣ ಎಂದರು.
ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ಜಿ.ಪಿಕಮಲಾಕ್ಷ ಮಾತನಾಡಿ, ಪುಟ್ಟಪರ್ತಿ ಸತ್ಯಸಾಯಿಬಾಬಾ ಅವರು ಅರಾಧನಾ ಮಹೋತ್ಸವನ್ನು ಕಳೆದ ಮೂರು ವರ್ಷದಿಂದ ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ ಬಾಬಾ ಹೆಸರಿನಲ್ಲಿ ಅನ್ನದಾನ ಸೇವೆಯನ್ನು ಮಾಡಿಕೊಂಡು ಹೋಗಲಾಗುತ್ತಿತ್ತು. ಅದರೆ ಕೊರೋನ ಮಹಾಮಾರಿಯಿಂದ ಬಾಬಾ ಹೆಸರಿನಲ್ಲಿ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ಅನ್ನು ನೀಡುವ ಮೂಲಕ ಸರಳ ರೀತಿಯಲ್ಲಿ ಅಚರಣೆಯನ್ನು ಮಾಡಿಕೊಂಡು ಹೋಗಲಾಗುತ್ತಿದೆ ಎಂದರು.
ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ ಸದಸ್ಯ ಚೇತನ್ ಬಾಬು ಇದ್ದರು.