ಕೊರೊನಾ ಅಮೆರಿಕಾ ಹಿಂದಿಕ್ಕಲಿದೆ ಭಾರತ: 2.75 ಲಕ್ಷ ಮಂದಿಗೆ ಸೋಂಕು

ನವದೆಹಲಿ,ಏ.೧೯-ದೇಶದಲ್ಲಿ ಕೊರೊನಾ ಸೋಂಕು ಪ್ರಸರಣ ವೇಗ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸತತ ಐದನೇ ದಿನವೂ ಕೂಡ ಏರಿಕೆಯಾಗಿದ್ದು, ಇಂದು ೨.೭೩ ಲಕ್ಷ ಗಡಿ ದಾಟುವ ಮೂಲಕ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳದಲ್ಲಿ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ. ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೧.೫೦ ಕೋಟಿ ದಾಟಿದೆ.
ಸೋಂಕು ಮತ್ತು ಸಾವಿನಲ್ಲಿ ದೇಶದಲ್ಲಿ ಇಂದೂ ಕೂಡ ದಾಖಲೆ ಬರೆದಿದೆ. ಕಳೆದ ೨೪ ಗಂಟೆಗಳಲ್ಲಿ ೨,೭೩,೮೧೦ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಅಮೇರಿಕವನ್ನು ಸೋಂಕು ಕಾಣಿಸಿಕೊಳ್ಳುವುದರಲ್ಲಿ ಹಿಂದಿಕ್ಕುವ ಮುನ್ಸೂಚನೆ ನೀಡಿದೆ.
ಹೊಸದಾಗಿ ೧೬೧೯ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ, ೧,೧೪೪,೧೭೮ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಇದರಿಂದ ಒಟ್ಟಾರೆ ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ೧,೫೦,೬೧,೯೧೯ ಮಂದಿಗೆ ಸೋಂಕು ತಗುಲಿದೆ.
ಕೊರೊನಾ ಸೋಂಕಿನಿಂದ ಇಲ್ಲಿಯವರೆಗೆ ೧,೨೯,೫೩,೮೨೧ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟಾರೆ ೧,೭೮,೭೬೯ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ನಿತ್ಯ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಆಮ್ಲಜನಕ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದಿರುವುದುದು, ರೆಮಿಡಿಸಿವಿರ್ ಔಷಧ ಕೊರತೆ ಸೇರಿದಂತೆ ಇನ್ನಿತೆರೆ ಸಮಸ್ಯೆ ಎದುರಾಗಿದೆ.
ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಸೋಂಕಿತರ ಪೈಕಿ ಮಹಾರಾಷ್ಟ್ರದಲ್ಲಿ ಸಿಂಹಪಾಲು ಇದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಳ ಕೇಂದ್ರ, ರಾಜ್ಯ ಮತ್ತು ಜನಸಾಮಾನ್ಯರನ್ನು ಆತಂಕ್ಕೆ ಸಿಲುಕವಂತೆ ಮಾಡಿದೆ.
ಸಕ್ರಿಯ ಪ್ರಕರಣ ಏರಿಕೆ:
ನಿತ್ಯ ೨ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೋನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಸದ್ಯ ದೇಶದಲ್ಲಿ ೧೯,೨೯,೩೨೯ ಮಂದಿಯಲ್ಲಿ ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರ, ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ,ಕೇರಳ, ತಮಿಳುನಾಡು, ದೆಹಲಿ ಚಂಧಿಗಡ, ಛತ್ತೀಸ್ ಗಡ, ರಾಜಸ್ತಾನ, ಪಂಜಾಬ್, ಸೇರಿದಂತೆ ವಿವಿಧ ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.

೧೨.೩೮ ಕೋಟಿಗೆ ಲಸಿಕೆ
ದೇಶದಲ್ಲಿ ಒಂದು ಕಡೆ ಕೊರೊನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿದ್ದು ಮತ್ತೊಂದು ಕಡೆ ಲಸಿಕೆ ಹಾಕುವ ಕಾರ್ಯ ನಡೆದಿದೆ.ಆದರೆ ಸೋಂಕು ಹೆಚ್ಚಳದ ಪ್ರಮಾಣಕ್ಕೆ ತಕ್ಕಂತೆ ಲಸಿಕೆ ಹಾಕುತ್ತಿಲ್ಲ.ಲಸಿಕೆ ಹೆಚ್ಚಳ ಮಾಡುವಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಿನ್ನೆ ಸಂಜೆ ತನಕ ದೇಶದಲ್ಲಿ ೧೨,೩೮,೫೨,೫೬೬ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕುಸಿದ ಚೇತರಿಕೆ ಪ್ರಮಾಣ
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನಿಂದ ಚೇತಿರಿಸಿಕೊಳ್ಳುತ್ತಿರುವ ಪ್ರಮಾಣ ಪ್ರತಿ ಶತ ೮೬.೬೨ಕ್ಕೆ ಕುಸಿದೆ.
ದೇಶದಲ್ಲಿ ಕೊರೋನಾ ಸೋಂಕಿನಿಂದ ಚೇತರಿಕೆ ಪ್ರಮಾಣ ಪ್ರತಿಶತ ೯೭.೦೬ಕ್ಕೆ ಏರಿಕೆಯಾಗಿತ್ತು.ಇತ್ತೀಚಿನ ದಿನಗಳಲ್ಲಿ ಸೋಂಕು ಅಂಕೆ ಮೀರಿ ನಿತ್ಯ ದಾಖಲೆ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವುದು ಸೋಂಕು ಮತ್ತು ಸಕ್ರಿಯ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಲು ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ನಿತ್ಯ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ,ಸದ್ಯ ಪ್ರತಿಶತ ಸಾವಿನ ಸಂಖ್ಯೆ ೧.೨೦ ರಷ್ಟಿದೆ ಎಂದು ತಿಳಿಸಲಾಗಿದೆ.