ಕೊರೊನಾ-ಅಗತ್ಯ ಕ್ರಮಕೈಗೊಳ್ಳಲು ಸಲಹೆ

ಲಕ್ಷ್ಮೇಶ್ವರ,ಸೆ16 ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಮಂಗಳವಾರ ಮಾನವ ಕೌಶಲ್ಯ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬಿಇಓ ಆರ್.ಎಸ್. ಬುರುಡಿ ಶಿಬಿರಕ್ಕೆ ಚಾಲನೆ ನೀಡಿ ‘ಕೋವಿಡ್‍ನಂಥ ಕಠಿಣ ಪರಿಸ್ಥಿತಿಯಲ್ಲೂ ಶಿಕ್ಷಕ ಶಿಕ್ಷಕಿಯರು ಅಂತರ ಕಾಯ್ದುಕೊಳ್ಳುವುದರೊಂದಿಗೆ ಮಾಸ್ಕ್ ಹಾಕಿಕೊಂಡು ವಿದ್ಯಾಗಮದ ಮೂಲಕ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ಕೊರೊನಾ ಭಯ ಪಡುವ ರೋಗವಲ್ಲ. ಆದರೆ ಅದರ ಬಗ್ಗೆ ಎಚ್ಚರಿಕೆ ಅಗತ್ಯ. ಶಿಕ್ಷಕರು ಕರ್ತವ್ಯ ನಿರ್ವಹಿಸುವಾಗ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಕ್ಕಳಿಗೆ ಹಂಚಲು ತಂದಿದ್ದ ಲೇಖನ ಸಾಮಗ್ರಿಗಳನ್ನು ಬಿಇಓ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಾಧಿಕಾರಿ ಬಿಆರ್‍ಸಿ ವೈ.ಎಚ್. ನದಾಪ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಚ್. ಪಾಟೀಲ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಮಲ್ಲಿಕಾರ್ಜುನ ರೆಡ್ಡಿ, ಮಲ್ಲಿಕಾರ್ಜುನ ಉಪ್ಪಿನ, ಮುಖ್ಯ ಶಿಕ್ಷಕ ಆರ್.ಬಿ. ಜೋಶಿ, ಜಿ.ಎಸ್. ಗುಡಗೇರಿ, ನಾಗರಾಜ ಆತಡಕರ, ಎಂ.ಡಿ. ವಾರದ, ಬಿ.ಎಂ. ಕುಂಬಾರ, ಸತೀಶ ಬೋಮಲೆ, ತಾಲ್ಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಹಣಗಿ, ರಮೇಶ ನಾಡಗೇರ, ಅಶೋಕ ಸೊರಟೂರ, ಗಿರೀಶ ಕೋಡಬಾಳ, ಬಿ.ಎಂ. ಯರಗುಪ್ಪಿ, ನಾಗರಾಜ ಶಿಗ್ಲಿ, ಜಿ.ಆರ್. ಪಾಟೀಲ ಇದ್ದರು.
**