ಕೊರೊನಾದಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಸಹಾಯಧನ

ಹೊನ್ನಾಳಿ.ಮೇ.೨೮ : ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಎಂ.ಪಿ.ರೇಣುಕಾಚಾರ್ಯ 15 ಸಾವಿರ ವೈಯಕ್ತಿಕ ದನ ಸಹಾಯ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ವ್ಯಕ್ತಿ ಓರ್ವ ಕಳೆದ ರಾತ್ರಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಮೃತ ವ್ಯಕ್ತಿಯ ಕುಟುಂಬ ಕಡು ಬಡ ಕುಟುಂಬವಾಗಿದ್ದು ಇದನ್ನು ಮನಗಂಡ ಶಾಸಕರು ಮೃತ ವ್ಯಕ್ತಿಯ ಕುಟುಂಬಕ್ಕೆ ವೈಯಕ್ತಿಕ ಸಹಾಯ ದನ ಮಾಡಿದರು. ಮೃತ ವ್ಯಕ್ತಿಯನ್ನು ಕಳೆದುಕೊಂಡು ಇಡೀ ಕುಟುಂಬವೇ ಕಣ್ಣೀರಲ್ಲೇ ಕೈತೊಳೆಯುತ್ತಿದ್ದು ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವಾನ ಹೇಳಿದರು.ಇದೇ ವೇಳೆ ಮಾತನಾಡಿದ ಶಾಸಕರು, ಕೊರೊನಾದಿಂದ ಮೃತ ಪಟ್ಟ ಕುಟುಂಬಕ್ಕೆ ಪಿಪಿ ಕಿಟ್ ಸೇರಿ ಆತನ ಕುಟುಂಬಕ್ಕೆ ಐದು ಸಾವಿರ ಸೇರಿ ಒಟ್ಟು ಒಂಬತ್ತು ಸಾವಿರ ಸಹಾಯ ದನ ನೀಡುವುದಾಗಿ ಹೇಳಿದ್ದೇ. ಆದರೇ ಮೃತ ವ್ಯಕ್ತಿಯ ಕುಟುಂಬದ ಸಂಕಷ್ಟವನ್ನು ಕಂಡು 15 ಸಾವಿರ ವೈಯಕ್ತಿ ಸಹಾಯ ಮಾಡುತ್ತಿದ್ದೇನೆ ಎಂದರು.ಮೃತ ವ್ಯಕ್ತಿಗೆ ಬೆಲೆ ಕಟ್ಟಲು ಆಗುವುದಿಲ್ಲಾ, ಆದರೇ ಅಳಿಲು ಸೇವೆ ಮರಳು ಭಕ್ತಿ ಎಂಬುವಂತೆ ನನ್ನ ಕೈಲಾದಷ್ಟು ಸಹಾಯವನ್ನು ನಾನು ಮಾಡುತ್ತಿದ್ದೇನೆ ಎಂದರು.