ಕೊರೊನಾದಿಂದ ಜಾಗೃತರಾಗಿರಲು ಕರೆ

ಹೊನ್ನಾಳಿ.ಮಾ.೩೦; ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಜಾಗೃತರಾಗಿರ ಬೇಕು, ಜನರು ಕೋವಿಡ್ ಅನ್ನು ನಿರ್ಲಕ್ಷಿಸಿದರೇ ಲಾಕ್‌ಡೌನ್ ಮಾಡುವಂತಹ ಪ್ರಮಯ ಬಂದರೂ ಅಚ್ಚರಿ ಪಡ ಬೇಕಾಗಿಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ 31.63 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನರವೇರಿಸಿ, 22.20 ಲಕ್ಷ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಹಾಗೂ 11.82 ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಅಲೆ ಹೆಚ್ಚುತ್ತಿದ್ದು ಜನರು ಕೊರೊನಾದಿಂದ ಜಾಗೃತರಾಗಿ ಬೇಕೆಂದ ಶಾಸಕರು, ಜನರು ಕೋರೊನಾವನ್ನು ನಿರ್ಲಕ್ಷಿಸದಂತೆ ಕಿವಿ ಮಾತು ಹೇಳಿದರು.ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡ ಬೇಕೆಂದು ಪಣತೊಟ್ಟಿದ್ದು ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಅವಳಿ ತಾಲೂಕನ್ನು ಸಂಪೂರ್ಣ ಧೂಳು ಮುಕ್ತ ತಾಲೂಕು ಮಾಡಿ ರಾಜ್ಯದಲ್ಲೇ ಮಾದರಿ ತಾಲೂಕು ಮಾಡುತ್ತೇನೆ ಎಂದರು.ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಹಳ್ಳಿಗಳಲ್ಲೂ ನಿರ್ಮಾಣ ಮಾಡುತ್ತಿದ್ದು ಜನರು ಗ್ರಾಮಗಳನ್ನು ಸ್ವಚ್ಚ ಮಾಡುವುದು ಕೇವಲ ಗ್ರಾಮಪಂಚಾಯಿತಿ ಕೆಲಸ ಎಂದು ಸುಮ್ಮನಿರದೇ ಸ್ವಚ್ಚತೆಗೆ ಗ್ರಾಮಸ್ಥರು ಕೈಜೋಡಿಸುವಂತೆ ಕರೆ ನೀಡಿದರು.ವಿವಿಧ ಕಾಮಮಗಾರಿಗಳ ಉದ್ಘಾಟನೆ :ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ 65 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿ, ಎರಡು ಶಾಲಾಕೊಠಡಿ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುದ್ದಲಿಪೂಜೆ ನರವೇರಿಸಿದರು. ಇದೇ ವೇಳೆ ಕಮ್ಮಾರಗಟ್ಟೆ ಗ್ರಾಮದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿದರು.ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಎಲ್.ರಂಗನಾಥ್, ತಾಂಡಾಭಿವೃದ್ದಿ ನಿಗಮದ ನಿದೇರ್ಶಕರಾದ ಮಾರುತಿ ನಾಯ್ಕ ಸೇರಿದಂತೆ ಗ್ರಾಮಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮದ ಮುಖಂಡರಿದ್ದರು.