ಕೊರೊನಾದಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ

ದಾವಣಗೆರೆ. ಜೂ.೮; ಕೊರೊನಾ ಸಂದರ್ಭದಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ವೈದ್ಯರು, ಮೆಡಿಕಲ್ ಸ್ಟಾಫ್ ಅಂಬುಲೆನ್ಸ್ ಡ್ರೈವರ್, ಹೆಲ್ತ್ ವರ್ಕರ್, ಪೌರಕಾರ್ಮಿಕರಿಗೆ ಪ್ಯಾಕೇಜ್ ಹೆಲ್ತ್ ಕವರೇಜ್ ಒದಗಿಸಬೇಕೆಂದು ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ಹೆಚ್.ಜೆ ಮೈನುದ್ದೀನ್ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರುಮಹಾಮಾರಿಯ 2ನೇ ಅಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ.  ಐಸಿಯು ಬೆಡ್, ವೆಂಟಿಲೇಟರ್, ಕೋವಿಡ್ ಹಾಸ್ಪಿಟಲ್ ನಿರ್ಮಾಣದಲ್ಲಿ, ಟೆಸ್ಟ್ ಲ್ಯಾಬ್ ನಿರ್ಮಾಣ ಮಾಡಲಿ ವಿಫಲರಾಗಿದ್ದಾರೆ.ನಮ್ಮ ದೇಶದಲ್ಲಿ ತಯಾರಾದ  ವ್ಯಾಕ್ಸಿನ್ ವಿದೇಶಗಳಿಗೆ ರವಾನೆಯಾಗಿದೆ. ಇದುವರೆಗೆ 23 ಕೋಟಿ ಜನಕ್ಕೆ ವ್ಯಾಕ್ಸಿನೇಷನ್ ಪೂರೈಕೆಯಾಗಿದೆ ಎಂದು ಭಾಷಣದಲ್ಲಿ ಹೇಳುತ್ತಾರೆ,35 ಸಾವಿರ ಕೋಟಿ ವ್ಯಾಕ್ಸಿನೇಷನ್ ಉತ್ಪಾದನೆಗೆ ಬಜೆಟ್ ನಲ್ಲಿ ಅನುದಾನ ಇಡಲಾಗಿತ್ತು , ಈಗ ಆ ಹಣ ಎಲ್ಲಿ ಹೋಯಿತು ಎಂಬುದೇ ಗೊತ್ತಾಗುತ್ತಿಲ್ಲ, ಪಎಂ ಕೇರ್ ಫಂಡಿನಲ್ಲಿ ಎಷ್ಟು ಹಣ ಜಮಾ ಆಗಿದೆ ಎಷ್ಟು ಸದ್ಬಳಕೆ ಆಗಿದೆ ಎಂಬುದೇ ಲೆಕ್ಕವಿಲ್ಲ  ಪ್ರತಿನಿತ್ಯ  ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿಯೊಬ್ಬ ಭಾರತ ಪ್ರಜೆಗೆ ಉಚಿತ ವ್ಯಾಕ್ಸಿನೇಷನ್ ಎಂಬ ಚಾಟಿ ಬೀಸಿದ ನಂತರ  ದೇಶದ ಪ್ರಧಾನ ಮಂತ್ರಿಯವರು ವಾಕ್ಸಿನ್ ಒದಗಿಸುವ ಬಗ್ಗೆ  ಆಶ್ವಾಸನೆ ನೀಡುತ್ತಾರೆ ಎಂದು ಆರೋಪಿಸಿದರು. ಈ ಕೂಡಲೇ ಸಮರ್ಪಕ ವ್ಯಾಕ್ಸಿನ್ ನೀಡಬೇಕು,ಆಕ್ಸಿಜನ್ ಘಟಕಗಳನ್ನು ಪ್ರಾರಂಭಿಸಬೇಕು ಹಾಗೂ ಸುಳ್ಳು ಆಶ್ವಾಸನೆ ನೀಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಾಗರ್ ಎಲ್.ಎಂ.ಹೆಚ್,ಮೊಹಮ್ಮದ್ ಸಾದಿಕ್,ಮಹಮ್ಮದ್ ವಾಜೀದ್,ಫಾರೂಕ್ ಶೇಕ್, ಆರೀಫ್ ಇದ್ದರು.