ಕೊರೊನಾಗೆ ಹೆದರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಚಾಮರಾಜನಗರ: ಜೂ.02: ಕೊರೊನಾದಿಂದ ಹೆದರಿ, ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪತಿ, ಪತ್ನಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದ ಲ್ಲಿ ನಡೆದಿದೆ.
ತಾಲ್ಲೂಕಿನ ಮೂಕಹಳ್ಳಿಯಲ್ಲಿ ಗ್ರಾಮದ ಮಹದೇವಸ್ವಾಮಿ (45), ಅವರ ಪತ್ನಿ ಮಂಗಳಮ್ಮ, ಮಕ್ಕಳಾದ ಗೀತಾ ಹಾಗೂ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾದೇವಪ್ಪ ಅವರಿಗೆ ಕೊರೋನಾ ಪಾಸಿಟಿವ್ ಆಗಿ ಹೋಂ ಐಸೊಲೇಷನ್ ನಲ್ಲಿದ್ದರು. ಕೋವಿಡ್ ಸೋಂಕಿಗೆ ಹೆದರಿ ಇವರು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ಕಟುಂಬವು ಆರ್ಥಿಕ ಸಂಕಷ್ಟದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ.
20 ದಿನಗಳ ಹಿಂದೆ ಮಹದೇವಸ್ವಾಮಿ ಅವರಿಗೆ ಕೋವಿಡ್ ಸೋಂಕು ತಗುಲಿ ಗುಣಮುಖರಾಗಿದ್ದರು. ಇದೀಗ ಬೆಳಗ್ಗೆ ಇಡೀ ಕುಟುಂಬ ನೇಣಿಗೆ ಶರಣಾಗಿದೆ. ಸ್ಥಳಕ್ಕೆ ಪೆÇಲೀಸರು ಭೇಟಿನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.