ಕೊರೊನಾಗೆ ಯಾರೂ ಭಯಪಡಬೇಕಾಗಿಲ್ಲ; ನಿಯಮ ಪಾಲನೆ ಅಗತ್ಯ

ಮುಳಬಾಗಿಲು ಏ ೨೭- ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಯಾರೂ ಸಹ ಗಾಬರಿಪಡಬೇಕಾಗಿಲ್ಲ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೇಸರ್ ಬಳಕೆ ಮಾಡುವ ಮೂಲಕ ಕರೋನವನ್ನು ಹೋಗಲಾಡಿಸಲು ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಗ್ರಾ.ಪಂ ಅಧ್ಯಕ್ಷೆ ಮುನಿಲಕ್ಷ್ಮಮ್ಮರಾಧಕೃಷ್ಣ ತಿಳಿಸಿದರು.
ತಾಲೂಕಿನ ಎಮ್ಮೇನತ್ತ ಗ್ರಾ.ಪಂ ವತಿಯಿಂದ ೧೪ ಗ್ರಾಮಗಳಿಗೆ ಹಮ್ಮಿಕೊಳ್ಳಲಾದ ಸ್ಯಾನಿಟೇಸರ್ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ, ಕೊರೊನಾ ೨ ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮಾಂತರ ಭಾಗದಲ್ಲಿ ಸೋಂಕು ಹೆಚ್ಚಾಗಿದೆ ರೈತಾಪಿ ವರ್ಗದ ಜನರು ಕರೋನ ಬಗ್ಗೆ ಭಯಭೀತರಾಗಬೇಡಿ. ಬದಲಿಗೆ ಸರ್ಕಾರದ ನಿಯಮಗಳನ್ನು ಪಾಲಿಸಿ ಕೊರೋನ ಲಸಿಕೆಗಳನ್ನು ಪಡೆಯಬೇಕೆಂದು ಹೇಳಿದರು.
ಎಮ್ಮೇನತ್ತ ಗ್ರಾ.ಪಂ ಸದಸ್ಯ ಕೆ.ನಾಗರಾಜರೆಡ್ಡಿ ಮಾತನಾಡಿ ಗ್ರಾ.ಪಂ ಮಟ್ಟದಲ್ಲಿ ಪ್ರತಿ ಗ್ರಾಮದ ಮನೆ ಮನೆಗೂ ಸ್ಯಾನಿಟೇಜರ್ ಸಿಂಪಡಣೆ ಮಾಡಲಾಗುತ್ತದೆ. ಆದ್ದರಿಂದ ಸ್ಥಳೀಯರು ಪಂಚಾಯಿತಿ ಸಿಬ್ಬಂದಿಗೆ ಸಹಕಾರ ನೀಡಬೇಕು. ಮನೆಯಿಂದ ಹೊರ ಬಂದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಮರೆಯಬಾರದು, ಗ್ರಾಮೀಣ ಜನರು ನಗರಗಳಿಗೆ ವಿನಾ ಕಾರಣ ಹೋಗಿ ಬರುವುದನ್ನು ನಿಲ್ಲಿಸಬೇಕೆಂದು ಹೇಳಿದರು.
ಗ್ರಾ.ಪಂ ಸದಸ್ಯರಾದ ವಿಶ್ವನಾಥ್‌ರೆಡ್ಡಿ, ಹನುಮಪ್ಪ, ಅಮರಪ್ಪ, ಸುರೇಶ್, ಪದಕಾಷ್ಠಿ ಬಾಬು, ಮಂಜುನಾಥ್, ನಾರಾಯಣಸ್ವಾಮಿ, ಸುಬ್ರಮಣಿ ಸೇರಿದಂತೆ ಗ್ರಾ.ಪಂ ಸಿಬ್ಬಂದಿ ಇದ್ದರು.
೨೬ ಎಂ.ಬಿ.ಎಲ್ ಫೋಟೊ ೭ : ಮುಳಬಾಗಿಲು ತಾಲೂಕಿನ ಎಮ್ಮೇನತ್ತ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ಸ್ಯಾನಿಟೈಸಿಂಗ್ ಮಾಡುತ್ತಿರುವುದನ್ನು ಪರಿಶೀಲಿಸುತ್ತಿರುವ ಸದಸ್ಯರಾದ ಕೆ.ನಾಗರಾಜರೆಡ್ಡಿ, ವಿಶ್ವನಾಥ್‌ರೆಡ್ಡಿ, ಹನುಮಪ್ಪ, ಅಮರಪ್ಪ, ಸುರೇಶ್ ಮತ್ತಿತರರು ಇದ್ದಾರೆ.