ಕೊರೊನಾಗೆ ಬಿಜೆಪಿ ಮುಖಂಡ ಬಲಿ

ಬೀದರ:ಎ.27: ಬಿಜೆಪಿ ಬೀದರ್ ನಗರ ಘಟಕದ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೀರಾಲಾಲ್ ಕಾಂಬ್ಳೆ ಕರೊನಾಗೆ ಬಲಿಯಾಗಿದ್ದಾರೆ.
ಇಲ್ಲಿಯ ಕರ್ನಾಟಕ ಕಾಲೇಜು ಪಕ್ಕದ ದೀನದಯಾಳ ನಗರದ ನಿವಾಸಿಯಾದ ಕಾಂಬ್ಳೆ ಅವರಿಗೆ ಕಳೆದ 10 ದಿನಗಳ ಹಿಂದೆ ಪಾಸಿಟಿವ್ ಬಂದಿತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನ ಹೊಂದಿದ್ದಾರೆ.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಸಂಜೆ ನಗರದ ಕರ್ನಾಟಕ ಕಾಲೇಜು ಪಕ್ಕದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.