ಕೊರೊನಾಕ್ಕೆ ಬಲಿಯಾದ ಪವಾರ್‍ಗೆ ಭಾವಪೂರ್ಣ ಶೃದ್ದಾಂಜಲಿ

ವಾಡಿ:ಎ.29: ಮಹಾಮಾರಿ ಕೊರೋನಾ ರೋಗಕ್ಕೆ ತುತ್ತಾದ ಪುರಸಭೆ ಉಪಾಧ್ಯಕ್ಷ ದಿ. ತಿಮ್ಮಯ್ಯಾ ಪವಾರ ಅವರಿಗೆ ವಾಡಿ ಪುರಸಭೆ ವತಿಯಿಂದ ಭಾವಪೂರ್ಣವಾಗಿ ಶೃದ್ದಾಂಜಲಿ ಸಲ್ಲಿಸÀಲಾಯಿತ್ತು.

ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ, ಯುವಮುಖಂಡ ಶ್ರವಣಕುಮಾರ ಮೌಸಲಗಿ ಪುರಸಭೆಯ ಅವಧಿಯಲ್ಲಿ ಕಳೆದ 4 ವರ್ಷ ಅವಧಿಯಲ್ಲಿ ಪವಾರ್‍ರ ಅಭಿವೃದ್ಧಿ ಕಾರ್ಯ, ಸಮಾಜಸೇವೆ, ಸರಳ ಸಜ್ಜನಿಕೆ ನೆನಿಸಿಕೊಂಡರು. 9 ತಿಂಗಳಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಎಂದು ಮುಖ್ಯಾಧಿಕಾರಿ ವಿಠ್ಠಲ್ ಹಾದಿಮನಿ ನೆನಿಸಿಕೊಂಡರು.

ಈ ಸಂಧರ್ಭದಲ್ಲಿ ಅಧ್ಯಕ್ಷೆ ಝರೀನಾಬೇಗಂ ಸದಸ್ಯರಾದ ಮಹಮ್ಮದ ಗೌಸ್, ಮಲ್ಲಯ್ಯಾ ಗುತ್ತೇದಾರ್, ಶರಣು ನಾಟೇಕರ್, ಮುಖಂಡರಾದ ನಾಗೇಂದ್ರ ಜೈಗಂಗಾ, ಮಹಮ್ಮದ ಅಶ್ರಫಖಾನ್, ವಿಜಯಕುಮಾರ ಸಿಂಘೆ, ಶರಣಬಸು ಸಿರೂರಕರ್, ರೇಹಾನ್ ಕರೀಮ ಸೇರಿದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದ ಮುಖಂಡರು ಹಾಜರಿದ್ದರು.

ವಿಜಯನಗರ: ಪಟ್ಟಣದ ವಾರ್ಡ ನಂ-23 ವಿಜಯನಗರದಲ್ಲಿ ಅಗಲಿದ ಮಹಾನ ಚೇತನ ತಿಮ್ಮಯ್ಯಾ ಪವಾರಗೆ ವಿಜಯನಗರ ನಿವಾಸಿಗಳಿಂದ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತ್ತು. ಮುಖಂಡರಾದ ಜಗದೀಶ ಮುಕ್ಕನಾಳ್, ಮಲ್ಲಿಕಾರ್ಜುನ ಸೈದಾಪೂರ್, ಬಸಲಿಂಗಪ್ಪ ಕಾಡ್ಲೂರಕರ್, ಬಸವರಾಜ ಕಾಟಮಳ್ಳಿ, ಹಾಜಪ್ಪ ಲಾಡ್ಲಾಪೂರ್, ಕನಕಪ್ಪಾ, ಪರಶುರಾಮ ಕಟ್ಟಿಮನಿ, ಅಬ್ರಾಹಂ ರಾಜಣ್ಣ ಇದ್ದರು.

ಪಾರ್ಟಿ ಆಫೀಸ್: ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ, ಕಾಂಗ್ರೇಸ್ ಕಟ್ಟಾಳು ಆಗಿದ್ದ ದಿ.ತಿಮ್ಮಯ್ಯಾ ಪವಾರ ಅವರ ಅಗಲಿಕೆಯಿಂದ ಕಾಂಗ್ರೇಸ್ ಪಕ್ಷಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಹಿರಿಯ ಕಾಂಗ್ರೇಸ್ ಮುಖಂಡ ಟೋಪಣ್ಣ ಕೋಮಟೆ ಹೇಳಿದರು. ಈ ಸಂದರ್ಭದಲ್ಲಿ ಚಂದ್ರಸೇನ್ ಮೇನಗಾರ, ತುಕಾರಾಮ, ಚಾಂದಮಿಯ್ಯಾ, ರಘುವೀರ ಪವಾರ ಅನೇಕರು ಇದ್ದರು.