ಕೊರೊನಾಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ವೈದ್ಯರು ಸೇರಿ 15 ಆರೋಗ್ಯ ಸಿಬ್ಬಂದಿಗೆ ಸೋಂಕು

ಆಳಂದ:ಎ.29: ಕೊವಿಡ್-19 ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ವರವಾಬೇಕಿರುವ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಹಲವು ಕೊರತೆಗಳಿಂದ ಬಳಲುತ್ತಿದ್ದ ಹೊತ್ತಿನಲ್ಲಿ ನಿನ್ನೆ ಸಂಸದ ಭಗವಂತ ಖೂಬಾ ಅವರು ನೀಡಿದ ಭೇಟಿ ಆಡಳಿತ ಸುವ್ಯವಸ್ಥೆಗೆ ಫಲಕಾರಿ ನೀಡುವುದೇ ಎಂಬುದು ಸಾರ್ವಜನಿಕ ಎದುರು ನೋಡುವಂತಾಗಿದೆ.

ಸಂಸದರÀ ಭೇಟಿಯ ಬೆನ್ನೆಲೆಯೇ ಮಾದನಹಿಪ್ಪರಗಾ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಆಗಿದ್ದ ಕೊರೊನಾ ವಾರಿಯರಸ್ ಅನೀಲ ವಿಠ್ಠಲ ಖಂಡೆ (35) ಎಂಬಾತನು ಕೊರೊನಾ ಸೋಂಕಿಗೆ ಹಠಾತಾಗಿ ಮೃತಪಟ್ಟ ಘಟನೆ ನಡೆದಿದೆ.

ಇದರಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ದಯನೀಯ ಪರಿಸ್ಥಿತಿ ಕೈಮಿರಿದೆ ಎಂಬುದುಕ್ಕೆ ವಾರಿಯರಸ್ ನಿಧನವೂ ಒಂದು ನಿರ್ದಶನವಾಗಿ ಕಂಡಿದೆ.

ಮೃತನು ಸೋಂಕಿಗೆ ಒಳಗಾದ ಮೇಲೆ ಏ.23ಕ್ಕೆ ಕಲಬುರಗಿಯ ವಾತ್ಸಲ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರು. ಚಿಕಿತ್ಸೆ ಫಲಕಾರಿಯಾಗದೆ. ಬುಧವಾರ( 6ನೇದಿನಕ್ಕ )ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತ ಸಿಬ್ಬಂದಿಯು ಮಹಾರಾಷ್ಟ್ರ ಗಡಿ ಭಾಗದ ಹಿರೋಳಿ ಗಡಿ ಚೆಕ್‍ಪೋಸ್ಟ್‍ನಲ್ಲೇ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಹೊತ್ತಿನಲ್ಲಿ ಸೋಂಕು ತಗಲಿ, ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ್ದಾರೆ ಎಂದು ಸಹದ್ಯೋಗಿಗಳು ಹೇಳಿಕೊಂಡಿದ್ದಾರೆ.

ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇಲಾಖೆಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಕ್ಷಾಂತ ಹಣ ಹಾಕಿ ಜೀವವೂ ಉಳಿಯಲಿಲ್ಲ. ಇನ್ನೂ ಸಾರ್ವಜನಿಕರ ಸ್ಥಿತಿ ಯಾವ ಲೆಕ್ಕ ಎಂದು ಆಡಿಳಿಕೊಳ್ಳುವಂತಾಗಿದೆ.

ಇದುವರೆಗೂ 2495 ಜನರಿಗೆ ಕೊರೊನಾ ಮಹಾಮಾರಿ ಸೋಂಕು ತಗಲಿದೆ. ಈ ಪೈಕಿ 1966 ಮಂದಿ ಗುಣಮುಖರಾಗಿದ್ದರೆ. 31 ಜನರ ಬಲಿ ತೆಗೆದುಕೊಂಡಿದೆ. ಇಷ್ಟಾಗಿಯೂ ಸೋಂಕಿತರಿಗೆ ಸ್ಥಳೀಯ ಆಸ್ಪತ್ರೆಯಲ್ಲೇ ವೆಲ್ಟಿಲೇಟರ್, ಸಮರ್ಪಕ ಆಕ್ಸಿಜನ್, ಐಸಿಯೂನಂತ ಸೌಲಭ್ಯಗಳ ಒದಗಿಸದೆ ಇರುವುದು ವಿಪರ್ಯಾಸ್ಯವಾಗಿದೆ.

ಇನ್ನೂ 140 ಹಳ್ಳಿ ಒಳಗೊಂಡ ತಾಲೂಕು ಕೇಂದ್ರ ಆಳಂದ ಪಟ್ಟಣದ ಬೃಹತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಮತ್ತು ಸಿಲಿಂಡರ್ ಹಾಗೂ ವೈದ್ಯ ಸಿಬ್ಬಂದಿಗಳ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ವೈದ್ಯರು ಹಿಂದೆ ಮುಂದೆ ನೋಡುವ ದಯನೀಯ ಪರಿಸ್ಥಿತಿ ಕಾಡತೊಡಿದೆ.

ಇದಕ್ಕೆ ಹೊರತಲ್ಲ ಎನ್ನುವಂತೆ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯಗಳಿಲ್ಲದೆ ನರಳಿ ತಾಲೂಕಿನ ಆಸ್ಪತ್ರೆಗೆ ಬಂದರೆ ಇಲ್ಲೂ ಸಹ ಮುಖ್ಯವಾದ ಸಿಲಿಂಡರ್ ಕೊರತೆ ಆಗಿರುವುದು ರೋಗಿಗಳಿಗೆ ಹಾಗೂ ಆಸ್ಪತ್ರೆಯ ವೈದ್ಯರಿಗೆ ಪರಿಸ್ಥಿತಿ ನುಂಗದ ತುತ್ತಾಗಿದೆ.

ಸೋಂಕಿತರು ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿನ ಸೂಕ್ತ ಚಿಕಿತ್ಸೆ ಇಲ್ಲದಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ಮಂದಿ ದಾಖಲಾಗಿದ್ದು, ಲಕ್ಷಾಂತರ ರೂಪಾಯಿ ಆಸ್ಪತ್ರೆಯ ಖರ್ಚು ಭರಿಸಿದ್ದಾರೆ. ಇಷ್ಟಾಗಿಯೂ ಕೆಲವರು ಜೀವ ಉಳಿಸಿಕೊಳ್ಳಲಾಗದೆ ಶವದೊಂದಿಗೆ ಹಿಂದಿರುಗಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆಸ್ಪತ್ರೆಯಲ್ಲಿ 7 ದೊಡ್ಡ ಸಿಲಿಂಡರ್ ಹಾಗೂ 12 ಸಣ್ಣ ಪ್ರಮಾಣದ ಸಿಲೆಂಡರ್‍ಗಳಿವೆ. ಎಂಟು ಮಂದಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ರೋಗಿಗಳನ್ನು ದಾಖಲಾದರೆ ಈ ಸಿಲಿಂಡರ್‍ಗಳು ಸಾಕಾಗುವುದಿಲ್ಲ. ಬೇಡಿಕೆಗಾಗಿ 20 ದೊಡ್ಡ ಹಾಗೂ 20 ಸಣ್ಣ ಪ್ರಮಾಣದ ಸಿಲಿಂಡರ್‍ಗಳ ಪ್ರಸ್ತಾವನೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿದರು ಸಹ ಇನ್ನೂ ದೊರೆತ್ತಿಲ್ಲ. ಹೀಗಾಗಿ ಆಕ್ಸಿಜನ್ ಸಿಲಿಂಡರ್‍ಗಳ ಕೊರತೆಯಿಂದ ಕೋವಿಡ್ ರೋಗಿಗಳನ್ನು ದಾಖಲಿಸಲು ಹಿಂದೇಟಾಗುತ್ತಿದೆÀ ಎನ್ನಲಾಗಿದೆ.

40 ಹಾಸಿಗೆ ಸಜ್ಜು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ನೂರು ಹಾಸಿಗೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಒಟ್ಟು 40 ಹಾಸಿಗೆ ಮೀಸಲಿಟ್ಟಿದ್ದು, ಇದರಲ್ಲಿ 16ರಿಂದ 20 ಹಾಸಿಗೆ ಚಾಲ್ತಿಯಲ್ಲಿದ್ದು, ಇನ್ನೂಳಿದ 20 ಹಾಸಿಗೆ ಕಾಯ್ದಿರಿಸಲಾಗಿದೆ. ಆದರೆ ತಾಲೂಕಿನಲ್ಲಿ ನೂರಾರು ಮಂದಿ ಸೋಂಕಿತರು ದಾಖಲಾಗುತ್ತಲೇ ಇದ್ದರು ಅಗತ್ಯವಿದ್ದವರಿಗಾದರು ಸ್ಥಳೀಯ ಆಸ್ಪತ್ರೆಯಲ್ಲಿ ತಕ್ಕಮಟ್ಟಿನ ಚಿಕಿತ್ಸೆ ನೀಡಲು ಕೊರತೆಗಳು ಎದ್ದುಕಾಣುತ್ತಿವೆ.

15 ಸಿಬ್ಬಂದಗಳಿಗೆ ಸೋಂಕು: ಸಾರ್ವಜನಿಕ ಆಸ್ಪತ್ರೆಯ ಇರುವ ಸಿಬ್ಬಂದಿಗಳಲ್ಲಿ 15 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಓರ್ವ ವೈದ್ಯರು ಸೇರಿ ನಾಲ್ವರು ಗುಣಮುಖರಾಗಿದ್ದಾರೆ. ಇನ್ನೂ ಓರ್ವ ಮಹಿಳಾ ವೈದ್ಯೆ, ಲಾಬ್ ಟೆಕ್ನಿಸೆನ್, ಐವರು ಗ್ರೂಪ್ ಡಿ. ನೌಕರರು, ಫಾರ್ಮಶಿಷ್ಟ ಹಾಗೂ ಮೂವರು ಸ್ಟಾಪ್‍ನರ್ಸ್ ಗಳಿಗೆ ಸೋಂಕು ತಗಲಿದ್ದರಿಂದ ಚಿಕಿತ್ಸೆಗೊಳಗಾಗಿದ್ದಾರೆ. ಇದರಿಂದ ಆಸ್ಪತ್ರೆಗೆ ಮತ್ತಷ್ಟು ಸಿಬ್ಬಂದಗಳ ಕೊರತೆ ಎದುರಾಗಿದೆ.

ವೈದ್ಯ ಸಿಬ್ಬಂದಿಗಳ ಕೊರತೆ: ಆಸ್ಪತ್ರೆಗೆ ಬೇಕಾಗಿರುವ ವೈದ್ಯರ ಸಂಖ್ಯೆ 10, ಸ್ಟಾಪ್‍ನರ್ಸ್ 10, ಗ್ರೂಫ್ ಡಿ. ನೌಕರರು 10 ಜನರ ಬೇಡಿಕೆಯ ಇದೆ. ಕೋವಿಡ್ ಚಿಕಿತ್ಸೆಯ ಕೊರತೆಗಳ ನಡುವೆ 8879 ಜನರಿಗೆ ಕೋವಿಡ್-19 ತಪಾಸಣೆ ಕೈಗೊಳ್ಳಲಾಗಿದೆ. 1947 ಜನರಿಗೆ ವಾಕ್ಸಿನ್ ನೀಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಚಂದ್ರಕಾಂತ ನರಿಬೋಳ ಅವರು ತಿಳಿಸಿದ್ದಾರೆ.

-: ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಲಭ್ಯ:

ಕೋವಿಡ್-19 ಸೋಂಕಿತರ ಚಿಕಿತ್ಸೆಗೆ 40 ಹಾಸಿಗೆ ಕಾಯ್ದಿರಿಸಿದರೆ, ಇನ್ನೂಳಿದ 60 ಹಾಸಿಗೆ ಸಾಮಾನ್ಯ ಕಾಯಿಲೆಯ ರೋಗಿಗಳ ಚಿಕಿತ್ಸೆ ಕಾಯ್ದಿರಿಸಲಾಗಿದೆ. ವೈರಸ್ ಹಾವಳಿಗೆ ಹೆದರಿ ಸಾಮಾನ್ಯ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿರಬಹುದು. ಆದರೆ ಸರ್ಕಾರಿ ಆಸ್ಪತ್ರೆಗೆ ಬರುತ್ತಿಲ್ಲ. ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಆಕ್ಸಿಜನ್ ಸಿಲಿಂಡರ್ ಭರ್ತಿಗೆ ಕೋರಲಾಗಿದೆ. ಸಮಯಕ್ಕೆ ಬಾರದೆ ವಿಳಂಬವಾಗುತ್ತಿದೆ.

ಡಾ| ಚಂದ್ರಕಾಂತ ನರಿಬೋಳ

ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಆಳಂದ.