ಕೊರೊನಾ:ಇಂದು 8778 ಜನರಿಗೆ ಸೊಂಕು. 67ಸಾವು

ಬೆಂಗಳೂರು, ಏ.13- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹಲವು ದಿನಗಳಿಂದ ಏರಿಕೆಯಾಗುತ್ತಿದ್ದು ಇಂದು ಸೋಂಕಿತರ ಸಂಖ್ಯೆ ನಿನ್ನೆ ಗಿಂತ ಕಡಿಮೆ ಇದೆ ಆದರೆ ಸಾವಿನ ಪ್ರಮಾಣ ಬಾರಿ ಏರಿಕೆಯಾಗಿದೆ.
ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 67 ಸೋಂಕಿತ ರು ಮೃತಪಟ್ಟಿದ್ದು, ಬೆಂಗಳೂರು ನಗರ ದಲ್ಲಿ 55ಮಂದಿ ಮೃತಪಟ್ಟಿದ್ದಾರೆ ಕಲ್ಬುರ್ಗಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ .ಮೈಸೂರು ಬೀದರ್, ತಲಾ ಇಬ್ಬರು ಶಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಬೆಳಗಾವಿ ಧಾರವಾಡ ಹಾವೇರಿ, ವಿಜಯಪುರ ಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.

ಇಂದು ರಾಜ್ಯದಲ್ಲಿ 8778 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು6079 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 67 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1083647ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು992003 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 78617 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13008 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 474ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 5500ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 493869ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 55ಸೋಂಕಿತರು ಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ4910ಕ್ಕೆ ಏರಿಕೆಯಾಗಿದೆ.
ಇಂದು4415ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ431383 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟ57575 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 73 ,ಬಳ್ಳಾರಿ 168, ಬೆಳಗಾವಿ 42, ಬೆಂಗಳೂರು ಗ್ರಾಮಾಂತರ 163, ಬೀದರ್ 198 ಚಾಮರಾಜನಗರ 51, ಚಿಕ್ಕಬಳ್ಳಾಪುರ 114, ಚಿಕ್ಕಮಗಳೂರು 19, ಚಿತ್ರದುರ್ಗ 45, ದಕ್ಷಿಣ ಕನ್ನಡ 142, ದಾವಣಗೆರೆ 66, ಧಾರವಾಡ 132, ಗದಗ 30, ಹಾಸನ 150, ಹಾವೇರಿ 17, ಕಲಬುರಗಿ 290, ಕೊಡಗು 14, ಕೋಲಾರ 67, ಕೊಪ್ಪಳ 29, ಮಂಡ್ಯ 114, ಮೈಸೂರು 492, ರಾಯಚೂರು 80, ರಾಮನಗರ 37, ಶಿವಮೊಗ್ಗ 95, ತುಮಕೂರು 350, ಉಡುಪಿ 75, ಉತ್ತರ ಕನ್ನಡ 75, ವಿಜಯಪುರ 105, ಯಾದಗಿರಿ 45.