ಕೊರೊನಾ:ಇಂದು 2792 ಜನರಿಗೆ ಸೊಂಕು ,16 ಸಾವು

ಬೆಂಗಳೂರು, ಮಾ. 29- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹಲವು ದಿನಗಳಿಂದ ಏರಿಕೆಯಾಗುತ್ತಿದ್ದು ಇಂದು ಸೋಂಕಿತರ ಸಂಖ್ಯೆ ನಿನ್ನೆ ಗಿಂತ ಕಡಿಮೆ ಇದೆ ಆದರೆ ಸಾವಿನ ಪ್ರಮಾಣ ಹೆಚ್ಚಾಗಿದೆ.
ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 16 ಸೋಂಕಿತ ರು ಮೃತಪಟ್ಟಿದ್ದು, ಬೆಂಗಳೂರು ನಗರ ದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಹಾಸನದಲ್ಲಿ ಮೂವರು ಮೈಸೂರಿನಲ್ಲಿ ಇಬ್ಬರು ಮಂಡ್ಯ ಹಾಗೂ ಬೀದರ್ ತಲಾ ಒಬ್ಬರು ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.

ಇಂದು ರಾಜ್ಯದಲ್ಲಿ 2792 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು1964 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 16 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ989804ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು953416 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 23849 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12520 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 227 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1742 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 429915ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 9ಸೋಂಕಿತರು ಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ4590ಕ್ಕೆ ಏರಿಕೆಯಾಗಿದೆ.
ಇಂದು1356 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ409065 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟ16259 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 12, ಬಳ್ಳಾರಿ 33, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 28, ಬೀದರ್ 247, ಚಾಮರಾಜನಗರ 04, ಚಿಕ್ಕಬಳ್ಳಾಪುರ 06, ಚಿಕ್ಕಮಗಳೂರು 25, ಚಿತ್ರದುರ್ಗ 05, ದಕ್ಷಿಣ ಕನ್ನಡ 45, ದಾವಣಗೆರೆ 02, ಧಾರವಾಡ 55, ಗದಗ 14, ಹಾಸನ 32, ಹಾವೇರಿ 03, ಕಲಬುರಗಿ 118, ಕೊಡಗು 02, ಕೋಲಾರ 33, ಕೊಪ್ಪಳ 21, ಮಂಡ್ಯ 41, ಮೈಸೂರು 110, ರಾಯಚೂರು 07, ರಾಮನಗರ 06, ಶಿವಮೊಗ್ಗ 05, ತುಮಕೂರು 60, ಉಡುಪಿ 71, ಉತ್ತರ ಕನ್ನಡ 15, ವಿಜಯಪುರ 28, ಯಾದಗಿರಿ 09.