ಕೊರೊನಾ:ಇಂದು 1445 ಜನರಿಗೆ ಸೊಂಕು, 10 ಸಾವು

ಬೆಂಗಳೂರು, ಮಾ. 22- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕೆಲದಿನಗಳಿಂದ ಏರಿಕೆಯಾಗುತ್ತಿದ್ದು ಇಂದು ಹೊಸ ಸೋಂಕು ಪ್ರಕರಣಗಳು ನಿನ್ನೆ ಗಿಂತ ಕಡಿಮೆ ಇದ್ದರು ಹೊಸ ಪ್ರಕರಣಗಳು ಸಾವಿರದ ಐನೂರುರ ಸನಿಹದಲ್ಲಿದೆ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ.
ಇಂದು ಕೊರೊನಾ ದಿಂದ ಮೃತಪಟ್ಟವರ ಸಂಖ್ಯೆ ಹಲವು ತಿಂಗಳ ನಂತರ ಮತ್ತೆ ಎರಡಂಕಿಗೆ ಬಂದಿದೆ.
ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 10 ಸೋಂಕಿತ ರು ಮೃತಪಟ್ಟಿದ್ದು, ಬೆಂಗಳೂರು ನಗರ ದಲ್ಲಿ 4 ಮಂದಿ ಮೃತಪಟ್ಟಿದ್ದಾರೆ ದಕ್ಷಿಣ ಕನ್ನಡ ,ಧಾರವಾಡ, ಕಲಬುರಗಿ ಮೈಸೂರು, ತುಮಕೂರು ಹಾಗು ಉತ್ತರ ಕನ್ನಡದಲ್ಲಿ, ತಲಾ ಒಬ್ಬರು ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ. ಬೆಂಗಳೂರು ನಗರದಲ್ಲಿ ಹೊಸ ಸೋಂಕು ಪ್ರಕರಣಗಳು ನಿನ್ನೆಗಿಂತ ಕಡಿಮೆಯಾಗಿದೆ.
ಇಂದು ರಾಜ್ಯದಲ್ಲಿ 1445 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು661 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 10 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ971647ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು944917 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 14268 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12444 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 136 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 886 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 418558ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 4 ಸೋಂಕಿತರು ಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ4553 ಕ್ಕೆ ಏರಿಕೆಯಾಗಿದೆ.
ಇಂದು294 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ404116 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟ9888 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 07, ಬಳ್ಳಾರಿ 09, ಬೆಳಗಾವಿ 03, ಬೆಂಗಳೂರು ಗ್ರಾಮಾಂತರ 12, ಬೀದರ್ 51, ಚಾಮರಾಜನಗರ 03, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 01, ಚಿತ್ರದುರ್ಗ 06, ದಕ್ಷಿಣ ಕನ್ನಡ 31, ದಾವಣಗೆರೆ 08, ಧಾರವಾಡ 16, ಗದಗ 05, ಹಾಸನ 20, ಹಾವೇರಿ 02, ಕಲಬುರಗಿ 43, ಕೊಡಗು 23, ಕೋಲಾರ 22, ಕೊಪ್ಪಳ 01, ಮಂಡ್ಯ 28, ಮೈಸೂರು 61, ರಾಯಚೂರು 05, ರಾಮನಗರ 00, ಶಿವಮೊಗ್ಗ 05, ತುಮಕೂರು 51, ಉಡುಪಿ 113, ಉತ್ತರ ಕನ್ನಡ 07, ವಿಜಯಪುರ 10, ಯಾದಗಿರಿ 03.