ಕೊರೆಯುವ ಚಳಿಯಲ್ಲಿ ಸೈನಿಕ, ಐಷಾರಾಮಿ ವಿಮಾನದಲ್ಲಿ ಜನಸೇವಕ ಪಿಎಂ: ರಾಗಾ ಕಿಡಿ

ನವದೆಹಲಿ, ಅ ೩೧- ದೇಶದ ಸೈನಿಕರು, ಕೊರೆಯುವ ಚಳಿಯಲ್ಲಿ, ಸಾಮಾನ್ಯ ಕುಟೀರ ವಾಸ ಮಾಡುತ್ತಿದ್ದರೇ ಜನ- ಪ್ರಧಾನ ಸೇವಕ ಎಂದು ಕರೆದುಕೊಳ್ಳುವವರು ೮,೪೦೦ ಕೋಟಿ ರೂಪಾಯಿಗಳ ಐಷಾರಾಮಿ ವಿಮಾನಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಕಿಡಿ ಕಾರಿದ್ದಾರೆ.

ಚೀನಾ ಹೆಸರನ್ನು ತೆಗೆದುಕೊಳ್ಳುವ ಭಯದಲ್ಲಿದ್ದಾರೆ. ಯಾರಿಗೆ ಒಳ್ಳೆಯ ದಿನಗಳು ಸಿಕ್ಕಿವೆ ಎಂದು ರಾಹುಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಚೀನಾ ಸೈನಿಕರು ಭಾರತೀಯ ಭೂಪ್ರದೇಶದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಜೆಪಿಯ ಮಾಜಿ ಸಂಸದ ಥುಪ್ಸ್ತಾನ್ ಚೆವಾಂಗ್ ಹೇಳಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಸಾಮಾನ್ಯ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದರೇ ಹೇಳಿರುವುದನ್ನು ಪ್ರಮುಖವಾಗಿ ರಾಹುಲ್ ಪ್ರಸ್ತಾಪಿಸಿ ಮತ್ತೊಮ್ಮೆ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.