ಕೊರಿಯಾಂಡರ್ ಚಿಕನ್

ಬೇಕಾಗುವ ಸಾಮಗ್ರಿಗಳು

*ಚಿಕನ್ ಪೀಸ್ – ೧/೨ ಕೆ.ಜಿ
*ಕೊತ್ತಂಬರಿ ಸೊಪ್ಪು – ೧ ಕಪ್
*ಹಸಿರು ಮೆಣಸಿನಕಾಯಿ – ೫-೬
*ಕರಿಬೇವು – ೧ ಸ್ಟಿಕ್
*ತೆಂಗಿನಕಾಯಿ ತುರಿ – ೧/೨ ಬೌಲ್
*ಗಸಗಸೆ – ೧/೨ ಚಮಚ
*ಗೋಡಂಬಿ – ೨ ಚಮಚ
*ಜೀರಿಗೆ – ೧/೨ ಚಮಚ
*ಧನಿಯಾ ಪುಡಿ – ೧/೨ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಗರಂ ಮಸಾಲ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ನೀರು ಹಾಕಿ ನುಣ್ಣಗೆ ರುಬ್ಬಿ ತೆಗೆದಿಡಿ. ಹಸಿ ತೆಂಗಿನಕಾಯಿ ತುರಿ, ಗಸಗಸೆ, ಗೋಡಂಬಿ, ನೀರು ಹಾಕಿ ಬೇರೆಯಾಗಿ ರುಬ್ಬಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಜೀರಿಗೆ, ಧನಿಯಾ ಪುಡಿ, ಚಿಕನ್ ಹಾಕಿ ಘಮ ಬರುವವರೆಗೆ ಫ್ರೈ ಮಾಡಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ರುಬ್ಬಿಟ್ಟುಕೊಂಡ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಪೇಸ್ಟ್ ಮತ್ತು ಅಗತ್ಯವಿರುವಷು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ನಂತರ ರುಬ್ಬಿಟ್ಟುಕೊಂಡಿರುವ ತೆಂಗಿನಕಾಯಿ ತುರಿ, ಗಸಗಸೆ, ಗೋಡಂಬಿ ಪೇಸ್ಟ್ ಹಾಕಿ ಎಲ್ಲವೂ ಸರಿಯಾಗಿ ಬೆರೆತುಕೊಳ್ಳುವಂತೆ ಮಿಕ್ಸ್ ಮಾಡಿ ಚಿಕನ್ ಹಾಕಿ ಹದವಾಗಿ ಬೇಯಲು ಬಿಡಿ. ಕೊನೆಯಲ್ಲಿ ಗರಂ ಮಸಾಲ ಸೇರಿಸಿದರೆ ರುಚಿರುಚಿಯಾದ ಕೊರಿಯಾಂಡರ್ ಚಿಕನ್ ಸವಿಯಲು ಸಿದ್ಧ.