ಕೊರಿಯರ್ ಮೂಲಕ ಮನವಿಗೆ
ರೈತರ ನಿರ್ಧಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ಕಳೆದ 20 ದಿನಗಳಿಂದ ತಮ್ಮ ಸಾಲ ಮನ್ನಾಗೆ ಆಗ್ರಹಿಸಿ ಮತ್ತು ಅವೈಜ್ಞಾನಿಕವಾಗಿ ಬಡ್ಡಿ ವಿಧಿಸಿರುವುದನ್ನು ವಿರೋಧಿಸಿ ನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಸತ್ಯಾಗ್ರಹ ನಡೆಸುತ್ತಿರುವ ರೈತರ ಮನವಿ ಸ್ವೀಕರಿಸಲು ವ್ಯಾಂಕ್ ಅಧಿಕಾರಿಗಳು  ನಿರಾಕರಿಸಿರುವುದರಿಂದ ಕೊರಿಯರ್ ಮೂಲಕ ಕಳಿಸಲು ನಿರ್ಧರಿಸಿದ್ದಾರೆ.
ಮೊನ್ನೆ ವರೆಗೆ ದಿನ ನಿತ್ಯ ಬ್ಯಾಂಕ್ ಅಧಿಕಾರಿಗಳು ಬಂದು ನಮ್ಮ‌ ಮನವಿ ಸ್ವೀಕರಿಸುತ್ತಿದ್ದರು. ಆದರೆ ಈಗ ಬರುವುದಿಲ್ಲ ಎಂದು ಹೇಳಿರುವುದರಿಂದ ನಾವು ಸತ್ಯಾಗ್ರಹ ಮುಂದುವರಿಸಿ ದಿನಾಲು ಮನವಿ‌ಪತ್ರವನ್ನು ಕೊರಿಯರ್ ಮೂಲಕ ಕಳಿಸುವುದಾಗಿ ಸಂಘದ ಮುಖಂಡ ಮಾಧವ ರೆಡ್ಡಿ ಹೇಳಿದ್ದಾರೆ.
ಮನವಿ ಸ್ವೀಕರಿಸಲು ಬರುವ ಅಧಿಕಾರಿಗೆ ರೈತ ಸಂಘದ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುತ್ತಿದ್ದಾರೆ. ಅದಕ್ಕಾ ಮನವಿ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂಬ ಮಾತು ಬ್ಯಾಂಕಿನ ವಲಯದಿಂದ ಕೇಳಿಬರುತ್ತಿದೆ.