ಕೊರನಾ ಮರೆತು ಬೀಜ ಪಡೆಯಲು ರೈತರ ಪರದಾಟ ರೈತ ಸಂಪರ್ಕ ಕೇಂದ್ರದ ಮುಂದೆ ಕಾದು ಕುಳಿತ ರೈತರು

ಆಳಂದ:ಜೂ.8:ಕೊರೊನಾ ಹಾವಳಿಯಿಂದ ತತ್ತರಿಸಿರುವ ರೈತರು ತೀರಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಳೆ ಬಂದು ಭೂಮಿ ಹದವಾಗಿ ಮುಂಗಾರು ಬಿತ್ತನೆ ಕಾರ್ಯ ಮಾಡಲು ರೈತರು ಅಗತ್ಯ ಬೀಜ ಪಡೆಯಲು ರೈತ ಸಂಪರ್ಕ ಕೇಂದ್ರದ ಮುಂದೆ ಪರದಾಡುವಂತಾಗಿದೆ. ಆಳಂದ ತಾಲೂಕಿನ ಮಾದನಹಿಪ್ಪರಗಾ ರೈತ ಸಂಪರ್ಕ ಕೇಂದ್ರದ ಮುಂದೆ ಕೊರೊನಾ ನಿಯಮ ಮರೆತು ನೂರಾರು ಜನ ರೈತರು ಸೇರಿ ಬೀಜ ಪಡೆಯಲು ಮುಗಿಬಿದ್ದಿದ್ದಾರೆ ಇದರಿಂದ ಬೀಜ ಸಿಗದೆ ಮದ್ಯಾಹ್ನದವರೆಗೂ ಕಾದು ಕುಳಿತ್ತಿರವುದು ಕಂಡು ಬಂದಿತು. ಮಾದಹಿಪ್ಪರಗಾ 24 ಹಳ್ಳಿಗಳ ದೊಡ್ಡ ಹೋಬಳಿ ಗ್ರಾಮವಾಗಿದೆ ಸುತ್ತಮುತ್ತ ಹಳ್ಳಿಗಳ ರೈತರು ಬೀಜ ರಸಗೊಬ್ಬರ ಪಡೆಯಲು ಇದೆ ರೈತ ಸಂಪರ್ಕ ಅವಲಂಬಿತರಾಗಿದ್ದಾರೆ. ಬಿತ್ತನೆ ಕಾರ್ಯ ಮಾಡಲು ಬೀಜ ಪಡೆಯಲು ರೈತರು ಒಮ್ಮೆಲೆ ಬಂದಿದ್ದರಿಂದ ಕೇಂದ್ರದ ಸಿಬ್ಬಂದಿ ಬೀಜ ವಿತರಣೆಯ ಸರಿಯಾದ ನಿರ್ವಹಣೆ ಮಾಡದೆ ಇರವುದರಿಂದ ರೈತ ಬೆಳೆಗ್ಗೆ ಬೀಜ ಸಿಗದೆ ಕಾಯುವಂತಾಗಿದೆ ಎಂದು ಸಿಬ್ಬಂದಿ ವಿರುದ್ದ ದೂರಿದ್ದಾರೆ. ಇದೆ 7ರಿಂದ 14ರವೆರಗೆ ಲಾಕಡೌನ್ ಅವಧಿ ವಿಸ್ತರಣೆ ಮಾಡಿದ್ದರಿಂದ ಬೆಳ್ಗೆಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ರೈತರ ಬೀಜ ಇನ್ನೀತರ ಪರಿಕರಗಳ್ನು ಮಾರಾಟ ಮಾಡಲು ಅನುಮತಿಸಲಾಗಿದೆ ಹಿಗಾಗಿ ಹೆಚ್ಚನ ಸಂಖ್ಯೆಯಲ್ಲಿ ರೈತರು ಬಂದಿದ್ದರಿಂದ ಬೀಜ ವಿತರಣೆಗೆ ಅಡಚಣೆ ಉಂಟಾಗುತ್ತಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಸ್ವಾತಿ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.ಸಿಬ್ಬಂದಿ ಕೊರತೆ ಇದ್ದು ಎಲ್ಲಾ ರೈತರಿಗೂ ಬೀಜ ವಿತರಣೆ ಮಾಡಲಾಗವುದು ತಾಳ್ಮೆಯಿಂದ ಸಹಕರಿಸಿ ಬೀಜ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ ನಿಯಮ ಉಲ್ಲಂಘನೆ ಆಗದಂತೆ ಬೀಜ ವಿತರಣೆಗೆ ಕ್ರಮ ವಹಸಿದ್ದು ರೈತರಿಗೆ ಟೊಕನ್ ಸೌಲಭ್ಯ ನೀಡಿದ್ದು ಅದರಂತೆ ಈಗಾಲೆ 400 ಟೋಕನ ನೀಡಿದ್ದೆವೆ ಏಕಾಏಕಿ ಎಲ್ಲರು ಒಮ್ಮೆ ಬಂದರೆ ಎಲ್ಲರಿಗೂ ತೊಂದರೆ ಆಗವುದು ಸರತಿಯಲ್ಲಿ ಬಂದು ಬೀಜ ಪಡೆದುಕೊಳ್ಳಬೇಕು-ಸ್ವಾತಿ ಅಲಮದ ಸಹಾಯಕ ಕೃಷಿ ಅಧಿಕಾರಿ


ರೈತ ಸಂಪರ್ಕ ಕೇಂದ್ರ 24 ಹಳ್ಳಿಗಳನ್ನು ಒಳಗೊಂಡಿದ್ದು ಎಲ್ಲಾ ಹಳ್ಳಿಯ ರೈತರು ಬೀಜ ಪಡೆಯಲು ಬರುತ್ತಾರೆ,ಟೊಕನ್ ನೀಡಿದ್ದು ಉತ್ತಮ ಆದರೆ ದಲ್ಲಾಳಿಗಳ ಹಾವಳಿಯಿಂದ ಬೀಜಗಳು ಮಹಾರಾಷ್ಟ್ರದ ಪಾಲಾಗುತ್ತಿವೆ ಇದನ್ನು ತಡೆಬೇಕು ಪ್ರತಿ ಗ್ರಾ.ಪಂಯಲ್ಲಿ ಬೀಜ ವಿತರಣೆ ಮಾಡಲು ಕ್ರಮವಹಿಸಬೇಕು ರೈತರಿಗೆ ಅನ್ಯಾಯವಾಗಿ ಕಾಳ ಸಂತೆಯಲ್ಲಿ ಬೀಜ ಮಾರಾಟವಾದರೆ ಕೇಂದ್ರ ಮುಂದೆ ಹೋರಾಟ ಮಾಡಲಾಗುವುದು-ಮಹಾದೇವ ಮೋಘಾ ದಲಿತ ಮುಖಂಡ