ಕೊರಡಂಪಳ್ಳಿ ಜೆಜೆಎಂ ಕಳಪೆ ಕಾಮಗಾರಿ

ಸೇಡಂ,ಮಾ,01: ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊರಡಂಪಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮೇಲೆ ಮಾರ್ಕ್ ಹಾಕದೆ ಅಡ್ಡಡ್ಡಿಯಾಗಿ ಜೆಸಿಬಿ ಯಿಂದ ಅಗೆದು ಪೈಪನ್ನು ಹಾಕಲಾಗಿದ್ದು ಜೆಜೆಎಂ ಸಂಪೂರ್ಣ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಜಯರಾಜ್ ಕೊರಡಂಪಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಪೈಪ್ ಹಾಕಿದ ನಂತರ ರೋಡನ್ನು ಹಗೆದು ತೆಗೆದ ಕಲ್ಲುಗಳು ಹಾಗೂ ಕಾಂಕ್ರೀಟನ್ನ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ಸಾರ್ವಜನಿಕರಿಗೆ ಅಡ್ಡಾಡಲು ಬಹಳ ತೊಂದರೆ ಆಗುತ್ತಿರುವುದರಿಂದ ಕೂಡಲೆ ಸಂಬಂಧಪಟ್ಟಂತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಳಪೆ ಮಟ್ಟದ ಕಾಮಗಾರಿಯನ್ನ ಪರೀಕ್ಷಿಸಬೇಕು ಹಾಗೂ ಸಿಸಿ ರಸ್ತೆ ಅಗೆಯದೆ ಮೇಲೆ ಹಾಕಿದ ಪೈಪನ್ನು ಕೂಡಲೇ ತೆಗೆದು ಸಿಸಿ ರಸ್ತೆಯನ್ನು ಮಾರ್ಕ್ ಮಾಡಿ ಅಗೆದು ಒಳಗಡೆ ಹಾಕಬೇಕು ನಲ್ಲಿಗಳು ಕಳಪೆ ಮಠದಿಂದ ಕೂಡಿದೆ ಈಗಾಗಲೇ ಅರ್ಧದಷ್ಟು ಮುರಿದು ಹೋಗಿವೆ ಕೂಡಲೇ ನಲ್ಲಿಗಳನ್ನು ಮರುಜೊಡನೆ ಮಾಡಬೇಕೆಂದು ವಿಜಯರಾಜ್ ಕೊರಡಂಪಳ್ಳಿ ಒತ್ತಾಯಿಸಿದ್ದಾರೆ.