ಬಳ್ಳಾರಿ 14 : ನಗರದ. 6ನೇ ವಾರ್ಡ್ ನ ಕೊಲ್ಲಾಪುರ ದೇವಸ್ಥಾನ ಹತ್ತಿರ ಕೊರಚರ ಬೀದಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ(ಕೊರಚ,ಕೊರಮ,
ಕೊರವ ಸಮುದಾಯದಗಳ ಒಕ್ಕೂಟ) ಜಿಲ್ಲಾ ಮತ್ತು ನಗರ ಘಟಕದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಅಧ್ಯಕ್ಷ ಹೆಚ್. ಕೆ ಹೆಚ್. ಹನುಮಂತಪ್ಪ ಡ ಅಂಬೇಡ್ಕರ್ ರವರ ಶಿಕ್ಷಣ ಸಂಘಟನೆ ಮತ್ತು ಹೋರಾಟ ಇವುಗಳನ್ನು ಅಳವಡಿಸಿ ಕೊಂಡಾಗ ನಾವು, ನಮ್ಮ ಜನಾಂಗವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದರು.
ರಾಜ್ಯ ಖಜಾಂಚಿ ರಮಣಪ್ಪ ಭಜಂತ್ರಿ ಮಾತನಾಡಿ, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ನಾವೆಲ್ಲರೂ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸಾಧ್ಯವಾಗಿದೆಂದರು.
ಜಿಲ್ಲಾ ಕಾರ್ಯದರ್ಶಿ ಕೆ, ಶ್ರೀನಿವಾಸ, ಖಜಾಂಚಿ ಕೆ ರಂಗಸ್ವಾಮಿ, ಮಾಜಿ ಅಧ್ಯಕ್ಷ ಕೆ. ಸಂತೋಷ, ಉಪಾಧ್ಯಕ್ಷ ಕೆ.ನಾಗರಾಜ್, ಜಂಟಿ ಕಾರ್ಯದರ್ಶಿಶಿವರಾಮ, ಪವನ್, ವೆಂಕಟೇಶ್, ಹುಲುಗಪ್ಪ, ಸಣ್ಣ ಬಾಬಣ್ಣ , ಕೊರಚ ಕೊರಮ ಜನಾಂಗದ ಇನ್ನಿತರರು ಇದ್ದರು.