ಕೊಯಿಲ ರಸ್ತೆ ಬದಿಯಲ್ಲಿ ಜಾನುವಾರಿನ ಎಲುಬು ಪತ್ತೆ: ಸೂಕ್ತಕ್ರಮಕ್ಕೆ ಹಿಂ.ಜಾ.ವೇ ಸಬಳೂರು ಶಾಖೆ ಆಗ್ರಹ

ಕಡಬ, ಎ.೫- ಕಡಬ ತಾಲೂಕು ಕೊಯಿಲ ಗ್ರಾಮದ ಕುದುಲೂರು- ಪರಂಗಾಜೆ -ಕೊಲ್ಯ -ಕೊರೆಪದವು ಯ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಜಾನುವಾರಿನ ಎಲುಬುಗಳು ಸೋಮವಾರ ಪತ್ತೆಯಾಗಿದೆ.
ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಜಾಗರಣ ವೇದಿಕೆಯ ಸಬಳೂರು ಅಯೋಧ್ಯಾನಗರ ಶಾಖೆಯ ಪದಾಧಿಕಾರಿಗಳು,ಇಂತಹ ಕೃತ್ಯ ಗಲಭೆ ಸೃಷ್ಟಿಸುವ ಹಿನ್ನೆಲೆಯಲ್ಲಿ ಮಾಡಲಾಗಿದ್ದು,ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದ್ದಾರೆ. ಕುಮಾರಧಾರ ನದಿಯ ಕೊರೆಪದವು ಎಂಬಲ್ಲಿ ಅವ್ಯಹತವಾಗಿ ಗೋವುಗಳ ವಧೆ ನಡೆಯುತ್ತದೆ.ಇದಕ್ಕೆ ಹಲವಾರು ನಿದರ್ಶನಗಳು ಸಿಗುತ್ತಿವೆ. ಇದೆಲ್ಲವು ಪೊಲೀಸರ ಅನತಿಯಂತೆ ನಡೆಯುತ್ತದೆ .ಎಂದು ಅರೋಪಿಸಿದ್ದಾರೆ.
ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು
ಹಿಂದೂಗಳ ಭಾವನೆಗೆ ದಕ್ಕೆ ಉಂಟು
ಮಾಡುತ್ತಿದೆ. ಈ ಕುರಿತು ಸಂಘಟನೆಯ ಪ್ರಮುಖರು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.