ಕೊಯನಾಡಿನ ಯುವಕ ಕೊರೋನಾಗೆ ಬಲಿ

ಸುಳ್ಯ , ಎ.೨೯- ಕೊಡಗು ಸಂಪಾಜೆ ಗ್ರಾಮದ ಕುಂದಲ್ಪಾಡಿ ಬಾಲಕೃಷ್ಣ ಎಂಬವರ ಪುತ್ರ ನಿತೀಶ್ (೩೦) ಕೊರೋನಾ ಬಾಧಿಸಿ ಮೃತಪಟ್ಟಿರುವ ಘಟನೆ ನಡೆದಿದೆ.
ನಿತೀಶ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಇತ್ತೀಚೆಗೆ ಊರಿಗೆ ಮರಳಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಅವರು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ
ಚಿಕಿತ್ಸೆಗಾಗಿ ಮಂಗಳೂರು ವೆನ್ಲೋಕ್ ನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಇಂದು ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ತಂದೆ ಬಾಲಕೃಷ್ಣ ಗೌಡ , ತಾಯಿ ರೇವತಿ, ಸಹೋದರಿಯರಾದ ಸಹನಾ ಸುಕುಮಾರ್ , ಕು. ಸನಿಹ, ಕುಟುಂಬಸ್ಥರನ್ನು ಅಗಲಿದ್ದಾರೆ.