ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಯಾರು ಆಗ್ತಾರ ಕಿಂಗ್* ರೆಡ್ಡಿ ತಾಕತ್ತಿನ ಪ್ರಶ್ನೆ
* ಕರಡಿ ಕುಣಿಯುತ್ತಾ
* ಮತದಾರ ಬದಲಾವಣೆ ಬಯಸುತ್ತಾನ
* ತಂಗಡಿಗೆ ಸಂಕಷ್ಟನಾ
* ವೈದ್ಯರಿಗೆ ಮನಸ್ಸು ಮತ ನೀಡ್ತಾರ
ಎನ್.ವೀರಭದ್ರಗೌಡ
ಬಳ್ಳಾರಿ, ಮೇ.03: ದಕ್ಷಿಣ ಭಾರತದ ಕುಂಭ ಮೇಳ ಎಂದೇ  ಪ್ರಸಿದ್ದವಾಗಿರುವ ಕೊಪ್ಪಳ ನಗರದ ಗವಿಸಿದ್ದೇಶ್ವರ ಜಾತ್ರೆಯು ಪ್ರಸಿದ್ದವಾದಂತೆ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಜಾತ್ರೆಯೂ ಪ್ರಸಿದ್ದೆ ಪಡೆದಿದೆ ಎಂದರೆ ತಪ್ಪಾಗಲಾರದು.
ಕಳೆದ ಹಲವು ಲೋಕಸಭಾ  ಚುನಾವಣೆಗಳಿಂದ ಕ್ಷೇತ್ರದ ಇಲ್ಲಿ ಕರಡಿ ಕುಣಿದು ಕಮಲ ಅರಳುತ್ತಾ ಬಂದಿತ್ತು.  ಈ ಬಾರಿ ಕರಡಿಗೆ ಟಿಕೆಟ್ ಇಲ್ಲದೆ. ಮತದಾರ ಮನಸ್ಸು ಬದಲಿಸಿ ಎಂದು ವೈದ್ಯರನ್ನು ಕಣಕ್ಕಿಳಿಸಿದೆ ಕಮಲ. ಜೊತೆಗೆ ಅವರ ಗೆಲುವಿಗಾಗಿ ಜನಾರ್ಧನರೆಡ್ಡಿಗೆ ಜವಾಬ್ದಾರಿ ನೀಡಿದೆ.
ಕಾಂಗ್ರೆಸ್ ಈ ಬಾರಿ ಗೆಲಯವಿಗಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಗೆಲ್ಲದಿದ್ದರೆ ತಂಗಡಿಗೆ ಸಂಕಷ್ಟ ಎಂದು ಸಹ ಅದು ಹೇಳಿದೆ. ಏನಾಗುತ್ತೆಂಬುದು ಮತದಾರ ಮೇ.7 ರಂದು ಮತ ಮುದೆ ಒತ್ತಲಿದ್ದು. ಜೂನ್ 4 ರಂದು ಈ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಿಂಗ್ ಎಂದು ತಿಳಿಯಲಿದೆ.
ಕೊಪ್ಪಳ ಲೋಕ ಸಭಾ ಕ್ಷೇತ್ರ ಒಂದು ರೀತಿ ಬಿಜೆಪಿ ಭ್ರದಕೋಟೆ. ಕಳೆದ ಮೂರು ಅವಧಿಯಲ್ಲಿ ಈ ಲೋಕಸಭಾ ಕ್ಷೇತ್ರದಲ್ಲಿ ಬಿಜಿಪಿಯಿಂದಲೇ ಅಭ್ಯರ್ಥಿಗಳು  ಆಯ್ಕೆಯಾಗಿದ್ದಾರೆ.
ಬಿಜೆಪಿ ಭದ್ರ ಕೋಟೆಯನ್ನು ಚಿದ್ರಮಾಡಲು ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಪ್ರಯೋಗ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಸನ್ನದ್ದವಾಗಿದೆ.
 ಕ್ಷೇತ್ರದ ಕಣದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿ ಇದ್ದರೂ,  ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿ ಗಳಿಗೆ ನೇರಹಣಾ ಹಣಿ ಇದೆ.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಕಳೆದ ಲೋಕಸಭಾ ಕ್ಷೇತ್ರದ ಚುನಾಬಣೆಯಲ್ಲಿ ಕೇವಲ 20 ಸಾವಿರ ಮತಗಳ ಅಂತರ ದಿಂದ ಸೋತಿದ್ದಾರೆ.
 ಕಾಂಗ್ರೆಸ್ ಅಭ್ಯರ್ಥಿ ಗೆ ಸೋತಿರುವ ಸಿಂಪತಿ.
ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ  ಹಾಗೂ ಕ್ಷೇತ್ರದ ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿಗೆ  ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಸೇರಿದ್ದಾರೆ.  ಈ ಎಲ್ಲಾ ಕರಾಣಗಳು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲುವಿಗೆ ಆನೆ ಬಲ ಬಂದಿದೆ ಎಂಬುದು ಆ ಪಕ್ಷದವರ ನಂಬಿಕೆಯಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಡಾ.ಬಸವರಾಜ ಕ್ಯಾವಟರ್ ಕಣದಲ್ಲಿ ಇದ್ದು  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ. ‌ಕರಡಿ ಎಲ್ಲಿ ಕುಣಿಯಲಿ ನಾವಂತು ಪಕ್ಷದ ನಿಷ್ಟಾವಂತರೆಂದು ಕಾರ್ಯಕರ್ತರ ಪಡೆ ಹೇಳುತ್ತಿದರ. ಹೊಸ ಮುಖವಾಗಿರುವ ಕ್ಯಾವಟರ್ ಗೆ ಮೋದಿ ಹವಾ ಹಾಗು  ಕ್ಷೇತ್ರದಲ್ಲಿ ಪಕ್ಷ ಉತ್ತಮ ಸಂಘಟಕರನ್ನು ಹೊಂದಿರುವುದು  ಸಹಾಯವಾಗಲಿದೆಂಬುದಾಗಿದೆ.
ಕ್ಷೇತ್ರದಲ್ಲಿ ಕುಟುಂಬದ  ಮತ್ತು ಹೊಂದಾಣಿಕೆಯ ರಾಜಕಾರಣಕ್ಕೆ ಡಾ.ಬಸವರಾಜ ಕ್ಯಾವಟರ್ ಅಭ್ಯರ್ಥಿ ಯಾಗುವಂತಾಗಿದೆ.
 ಕೊಪ್ಪಳ ಲೋಕಸಭಾ ಸಭಾ ಕ್ಷೇತ್ರ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮತ್ತು ಭತ್ತದ ಖಣಜ ಜೊತೆಗೆ ಉಕ್ಕಿನ ಕೈಗಾರಿಕೆ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಟೋಸ್ ಕ್ಲಸ್ಟರ್.  ಎಷ್ಯಾದಲ್ಲಿಯೆ ಅತಿದೊಡ್ಡ ರೈಸ್ ಟೆಕ್ನಾಲಜಿ ಪಾರ್ಕ್ ಹೊಂದಿದೆ.
 ಚುನಾವಣೆಯ ಕಾವು ಕ್ಷೇತ್ರದಲ್ಲಿ ಸೂರ್ಯನ ಪ್ರಕರತೆಗಿಂತ ಹೆಚ್ಚಾಗಿದೆ 43 ಡಿಗ್ರಿ ಸೆಲ್ಸಿಯಸ್ ಬಿಸಲಿನ ತಾಪ ಇದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ಇದನ್ನು ಲೆಕ್ಕಿಸದೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕ್ಷೇತ್ರ ವ್ಯಾಪ್ತಿ:
ಈ ಕ್ಷೇತ್ರವು ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಗಳು, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಮತ್ತು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಮತದಾರರು:
9,12,818 ಪುರುಷ ಮತದಾರರು, 9,38,750 ಮಹಿಳಾ ಮತದಾರರು ಹಾಗೂ 132 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ
ಒಟ್ಟು 18,51,700 ಮತದಾರರು ಇದ್ದಾರೆ. ಇವರಲ್ಲಿ
46162 ಯುವ ಮತದಾರರು, 25,619 ವಿಕಲಚೇತನ ಮತದಾರರು, 12,900 ಮತದಾರರು 85 ವರ್ಷ ಮೇಲ್ಪಟ್ಟವರು ಹಾಗೂ 609 ಸೇವಾ ಮತದಾರರಿದ್ದಾರೆ . ಕಳೆದ 2019ರ ಚುನಾವಣೆಯಲ್ಲಿ  ಮತದಾನ ಪ್ರಮಾಣ ಶೇ.68.41 ರಷ್ಟಾಗಿತ್ತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.