
ಸಂಜೆವಾಣಿ ವಾರ್ತೆ
ಕೊಪ್ಪಳ, ಸೆ.12: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವತಿಯಿಂದ ತಾಲೂಕ ಮಟ್ಟದ ಮಕ್ಕಳ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯಾ.ಟಿ.ಎಸ್.ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಕ್ರೀಡಾಧ್ವಜವನ್ನು ನೆರವೆರಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಕಾಶ ತಗಡಿನಮನಿ,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಬಸವರಾಜ,ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ,ತಾಲೂಕ ಅಧ್ಯಕ್ಷರಾದ ಕೊಟ್ರಪ್ಪ ಗಡಿಗಿ,ಕಾರ್ಯದರ್ಶಿ ಮಹೇಶ ಟಿಂಕಸಾಲಿ,ಉಪಾಧ್ಯಕ್ಷರದ ಹೋಳಿಬಸಯ್ಯಾ,ಬಿ.ಆರ್.ಪಿ.ಶರಣಪ್ಪ ರಡ್ಡೇರ,ಅಜೇಯ,ಶಿಕ್ಷಣ ಸಂಯೋಜಕರಾದ ಬೀಮಪ್ಪ ಹೂಗಾರ,ಪತ್ತಿನ ಸಂಘದ ನಿರ್ದೆಶಕರಾದ ಮಲ್ಲಪ್ಪ ಗುಡದನ್ನವರ,ಅಂದಪ್ಪ ಬೋಳರಡ್ಡಿ ಮುಂತಾದವರು ಹಾಜರಿದ್ದರು.
ಪೋಟೊ: ತಾಲೂಕ ಮಟ್ಟದ ಮಕ್ಕಳ ಕ್ರೀಡಾಕೂಟವನ್ನು ಉದ್ದೇಶಿಸಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಮಾತನಾಡಿದರು.