ಕೊಪ್ಪಳ ಜಿಲ್ಲೆಯ ಹನುಮಸಾಗರದಲ್ಲಿ ಜಂಪ್‍ರೋಪ್ ಒಳಾಂಗಣ ಕ್ರೀಡಾಂಗಣ 1.60 ಕೋಟಿ ವೆಚ್ಚದ ಕ್ರೀಡಾಂಗಣಕ್ಕೆ ಭೂಮಿ ಪೂಜೆ.

ಸಂಜೆವಾಣಿ ವಾರ್ತೆ
ಹೊಸಪೇಟೆ ನ.04: ರಾಜ್ಯದಲ್ಲಿಯೇ ಪ್ರಪ್ರಥಮ ಜಂಪ್‍ರೋಪ್ ಒಳಾಂಗಣ ಕ್ರೀಡಾಂಗಣ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಿರ್ಮಾಣಕ್ಕೆ ಅಣಿಯಾಗಿದೆ ಎಂದು ರಾಜ್ಯ ಜಂಪ್‍ರೋಪ್ ಅಸೋಶಿಯೇಷನ್ ಅಧ್ಯಕ್ಷ ವಿಶ್ವನಾಥ ಹಿರೇಮಠ ತಿಳಿಸಿದರು.
ಬುಧುವಾರ  ಕೊಪ್ಪಳ ಜಿಲ್ಲೆಯ ಹನುಮಸಾಗರದಲ್ಲಿ ಕುಷ್ಟಗಿ ಶಾಸಕ ಹಾಗೂ ಮಾಜಿ ಸಚಿವರು ಆಗಿರುವ ಅಮರೇಗೌಡ ಬೈಯಾಪೂರ ಭೂಮಿ ಪೂಜೆಯೊಂದಿಗೆ ನಿರ್ಮಾಣಕ್ಕೆ ಅಣಿಯಾದರೂ ಶಾಸಕರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ 1.60 ಭೂಸೇನಾ ನಿಗಮಕ್ಕೆ ಬಿಡುಗಡೆಯಾಗಿದ್ದು ದೀಪಾವಳಿಯ ಈ ಶುಭಸಂದರ್ಭದಲ್ಲಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ ಎಂದರು.
ಭೂಮಿ ಪೂಜೆ ನೆರವೇರಿಸಿದ ಮಾಜಿ ಸಚಿವರು ಆಗಿದ್ದ ಶಾಸಕ ಅಮೇರೆಗೌಡ ಬೈಯಾಪೂರ ಮಾತನಾಡಿ ಎಲ್ಲಾ ಕ್ರೀಡೆಗಳಿಗೂ ಬುನಾದಿಯಾಗಿರುವ ಜಂಪ್‍ರೊಪ್ ಒಂದು ಗ್ರಾಮೀಣ ಕ್ರೀಡೆಯಾಗಿದ್ದು ಇದನ್ನು ಗ್ರಾಮಾಂತರ ಪ್ರದೇಶದಿಂದಲೇ ಆರಂಭಿಸುವುದು ಸೂಕ್ತ ಎನ್ನಲಾಗಿದೆ. ಜಂಪ್‍ರೋಪ್ ಅಸೋಶಿಯೇಷನ್ ಈ ಗ್ರಾಮದಿಂದಲೇ ಸಂಕಲ್ಪವಾಗಿ ಆರಂಭವಾದ ಹಿನ್ನೆಲೆಯಲ್ಲಿ ನಾನು ಮನಸ್ಸು ಮಾಡಿದ್ದು ಉತ್ತರ ಕರ್ನಾಟಕದ ಇದಕ್ಕೆ ರಾಜ್ಯ ಮತ್ತು ದೇಶ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಯುವಂತಾಗಲಿ ಎಂದು ಹೆಚ್ಚಿನ ಅನುದಾನ ನೀಡಿರುವುದಾಗಿ ತಿಳಿಸಿದರು.
ಅಂದಾಜು 100/150 ಅಳತೆಯಲ್ಲಿ ಗ್ರಾಮ ಪಂಚಾಯಿತಿ ನೀಡಿದ ಭೂಮಿಯಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು ಪಂಚಾಯಿತಿ ಅಧ್ಯಕ್ಷ ಶಂಕ್ರಮ್ಮ ನಿರ್ವಾಣಿ,  ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಸದಸ್ಯರಾದ ಶ್ರೀಶೈಲ ಮೌಟಗಿ, ಪ್ರಶಾಂತ ಕುಲಕರ್ಣಿ, ರಿಯಾಜ ಖಾಜಿ, ಚಂದ್ರಬೆಳಗಲ್, ಪಿಡಿಓ ಲಿಂಗಪ್ಪ,  ಜಂಪ್‍ರೋಪ್ ಫೆಡರೇಷನ್ ಆಫ್ ಇಂಡಿಯಾದ ನಿರ್ದೇಶಕರಾದ ರೇಣುಕಾ, ಅನಂತ ಜೋಶಿ ಸೇರಿದಂತೆ ಅಸೋಶಿಯೇಷನ್ ರಾಜ್ಯ ನಿರ್ದೇಶಕರಾದ ಕೆ. ದಿವಾಕರ್, ರಮೇಶ ಪುರೋಹಿತ್, ಅಬ್ದುಲ್‍ಖರೀಮ್ ಒಂಟಿಹಳ್ಳಿ, ಗೌಸ್‍ಮೋದಿನ್, ಮಾರುತಿ ರಂಗರೇಜ್, ಸೂಚಪ್ಪ ಭೂವಿ ವಿಶ್ವನಾಥ ಕಣ್ಣನೂರು ಸೇರಿದಂತೆ ಭೂಸೇನಾ ನಿಗಮದ ಅಭಿಯಂತರ ಮಹಮ್ಮದ್ ಇರ್ಫಾನ್ ಇತರರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.