ಕೊಪ್ಪಳ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ


ಸಂಜೆವಾಣಿ ವಾರ್ತೆ
ಕೊಪ್ಪಳ, ಫೆ.28: ಇಲ್ಲಿಯ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಛತ್ರಪತಿ  ಶಿವಾಜಿ ಮಹಾರಾಜರ 396ನೇ ಜಯಂತಿ ಆಚರಿಸಲಾಯಿತು.ಮುಂಜಾನೆ 8-30ಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ತುಳಜಾ ಭವಾನಿಗೆ  ಪೂಜೆಸಲ್ಲಿಸಿ ಮೆರವಣಿಗೆಗಾಗಿ ತರಿಸಿದ ಶಿವಾಜಿ ಮಹಾರಾಜರ ಮೂರ್ತಿಗೆ ಹಾರ ಹಾಕಿದರು. ಕೊಪ್ಪಳದ ಸಂಸದ ಕರಡಿ ಸಂಗಣ್ಣ, MLC  ಹೇಮಲತಾ ನಾಯಕ, ಮರಾಠ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ MG ಮೂಳೆ, CV ಚಂದ್ರಶೇಖರ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಕಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಮಹಾಂತೇಶ ಪಾಟೀಲ, ಕೊಪ್ಪಳ ಜಿಲ್ಲಾ kko ಗೌರವ ಅಧ್ಯಕ್ಷ ಹನುಮಂತಪ್ಪ ಬಿಡನಾಳ, ಜಿಲ್ಲಾ ಅದ್ಯಕ್ಷ ರಾಘವೇಂದ್ರ ಹುಯಿಲಗೋಳ, ಕಾರ್ಯಾಧ್ಯಕ್ಷ ರಾಜೂ ಬಾಕಳೆ, kkmp ಉಪಾಧ್ಯಕ್ಷ ನಾಗೇಶರಾವ ವಂಶೆ, ಮರಾಠ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ ಬಡಿಗೇರ, ವೀರ ಶಿವಾಜಿ ಸೇನೆ ರಾಜ್ಯ ಅಧ್ಯಕ್ಷ ಕಮಲೇಶರಾವ, ಮಾಜಿ ಸೈನಿಕ MB ಅಳವಂಡಿ, ವಿಶ್ವನಾಥ ಅರಕೇರಿ, ರಾಮಣ್ಣ ಹದ್ದಿನ, ತಾಲೂಕ ಅಧ್ಯಕ್ಷ ಮಾರುತಿ ನಿಕ್ಕಮ್, ಪಾನಘಂಟಿ ವಕೀಲರು,  ನಗರ ಸಭೆ ಸದಸ್ಯ ಮುತ್ತುರಾಜ ಕುಷ್ಠಗಿ, ಸೋಮನಾಥ ಹಿಟ್ನಾಳ, ಉದಯ ಕಲಾಲ್ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ SSLCಯಲ್ಲಿ *ಅತಿ ಹೆಚ್ಚು ಅಂಕಗಳಿಸಿದ* (1) ಸಾಧನಾ ಬಿಲಂಕರ 99%, (2)ಸ್ನೇಹ ಬೆಳ್ಳಟ್ಟಿ 99% (3)ವೆಂಕಟೇಶ ಮುದ್ದಾಪೂರ 98% (4) ಭೂಮಿಕಾ ತಡಸ 97% (5) ನಂದಿನಿಬಾಯಿಮರಾಠಿ95%
PUC ಯಲ್ಲಿ ಶ್ವೇತಾ ಬೆಳ್ಳಟ್ಟಿ 95% BAMS ನಲ್ಲಿ ಸರಸ್ವತಿ  ವಿಶ್ವನಾಥ ಅರಕೇರಿ ಹಾಗೂ ಅಲ್ ಇಂಡಿಯಾ ಇಂಟರ ಯುನಿವರ್ಸಿಟಿ ಯೋಗಸಮ ಸ್ಪರ್ಧೆಯಲ್ಲಿ ಕವಿತಾ ಗೋಪಾಳಿ ಮತ್ತು ಕಾವ್ಯ ಗೋಪಾಳಿ,ಯವರನ್ನ ಸನ್ಮಾನಿಸಲಾಯಿತು.
 *(1) ಪ್ರಕಾಶ ಕಂದಕೂರ* ಅಂತರಾಷ್ಟ್ರೀಯ ಛಾಯಗ್ರಾಹಕ ಪ್ರಶಸ್ತಿ ಪುರಸ್ಕೃತರು *(2) ಕೃಷ್ಣಾಜಿ  ಬೋಸಲೆ* ರಾಷ್ಟ್ರಪತಿ ಪದಕ ವಿಜೇತರು ಅಗ್ನಿ ಶಾಮಕದಳ, *(3) ಡಾ!! ಮಹೇಶ ಗೋವನಕೊಪ್ಪ* ಮಹಿಳಾ ವೈದ್ಯಕೀಯ ಸೇವೆ, (4)  *ಶರಭೋಜಿರಾವ ಗಾಯಕವಾಡ* ಸಾಮಾಜಿಕ ಸೇವೆ, (5) *ಮಂಜುನಾಥ ಮರಾಠಿ* ಸಮಾಜ ಸೇವೆ (6) *ರವಿಚಂದ್ರ ಬಾಗಲಿ* (7) *ಮಹಾಂತೇಶ ನಿಕ್ಕಮ್* ಚಿತ್ರ ಕಲಾವಿದ ಇವರಿಗೆ ಸನ್ಮಾನಿಸಲಾಯಿತು.
 ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವದಲ್ಲಿ ತಾಯಿ ಜೀಜಾಬಾಯಿ ಯವರ ಪಾತ್ರ, ಸ್ತ್ರೀಯರ ಮೇಲಿನ ಅವರ ಗೌರವ ಕುರಿತು ಸಾವಿತ್ರಿ ಮುಜುಂದಾರ ಉಪನ್ಯಾಸ ನೀಡಿದರು. ಸಂಸದರಾದ *ಕರಡಿ ಸಂಗಣ್ಣ ಕಾರ್ಯಕ್ರಮ ಉದ್ಘಾಟಿಸಿ* ಶಿವಾಜಿ ಮಹಾರಾಜರ ಸಾದನೆ ಕುರಿತು ಶ್ಲಾಘಿಸಿದರು. *MLC ಹೇಮಲತಾ ನಾಯಕರು* ಎಲ್ಲಾ ಮಹಿಳೆಯರು ಜೀಜಾಬಾಯಿಯಂತೆ ತಮ್ಮ ಮಕ್ಕಳನ್ನ ಬೆಳಸಲು ಕೋರಿದರು. ಬಿಜೆಪಿ ರಾಷ್ಠೀಯ ಪರಿಷತ ಸದಸ್ಯ *CV ಚಂದ್ರಶೇಖರ* ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ತಂತ್ರಗಾರಿಕೆಯನ್ನ ಅಳವಡಿಕೊಳ್ಳಿ ಎಂದರು. ವೀರ ಶಿವಾಜಿ ಸೇನೆ ರಾಜ್ಯ ಅದ್ಯಕ್ಷ *ಕಮಲೇಶರಾವ* ಮಾತನಾಡಿ ಶೀಘ್ರದಲ್ಲಿ ಕೊಪ್ಪಳದಲ್ಲಿ ವೀರ ಶಿವಾಜಿ ಸೇನೇ ಘಟಕ ಸ್ಥಾಪನೆ ಆಗಲಿದೆ. ಜೂನನಲ್ಲಿ ಶಿವಾಜಿಯವರು ಪಟ್ಟಾಭಿಷೇಕದ ಸವಿನೆನಪಿಗಾಗಿ ರಾಜ್ಯ ಮಟ್ಟದ ಕಾರ್ಯಕ್ರಮ ಅಯೋಜಿಸಲಾಗುವದು. *MG ಮುಳೆ* ಮಾತನಾಡಿ ಮರಾಠ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮರಾಠ  ಜನಾಂಗದ ಅರ್ಥಿಕ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲಾಗಿದೆ ಅವುಗಳ ಸದುಪಯೋಗ ಪಡೆದುಕೊಳ್ಳಲು ಕೋರಿದರು.  ನಾಡಗೀತಯನ್ನ ಸದಾಶಿವ ಪಾಟೀಲ ಹಾಗೂ ಶಿವಾಜಿ ಕುರಿತು  ಮಾಜಿ ಸೈನಿಕ ರಾಯಪ್ಪ ಉಂಡಿ ಪ್ರಾರ್ಥನಾ ಗೀತೆ ಹಾಡಿದರು. ಸ್ವಾಗತವನ್ನ ವೆಂಕಟೇಶ ಕಾಟವಾ ಕೋರಿದರು. ವಂದನಾರ್ಪಣೆಯನ್ನ ವೆಂಕಟೇಶ ಬೊಸಲೆ ಸಲ್ಲಿಸಿದರು ಅಚ್ಚು ಕಟ್ಟಾದ ನಿರೂಪಣೆಯನ್ನು ಉಮೇಶಬಾಬು ಸುರ್ವೆ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಹಳದಿ ಬಣ್ಣದ ಸೀರೆ ದರಿಸಿ ಕುಂಭ ಹೊತ್ತ 3೦2 ಜನ ಮಹಿಳೆಯರು ಬೆಳಗಾಂವಿಯ 4೦ ಜನರ ನಾಶಿಕ ಡೋಲ ತಂಡ ಹಾಗೂ 8 ಅಡಿ ಎತ್ತರದ ಭವ್ಯ ಶಿವಾಜಿ ಮಹಾರಾಜರ ಮೂರ್ತಿಯೊಂದಿಗೆ ಮೆರವಣಿಗೆ ಕೊಪ್ಪಳದ ಸಾಹಿತ್ಯ ಭವನದಿಂದ ಜವಾಹರ ರಸ್ತೆಯ ಮೂಲಕ ಗಡಿಯಾರ ಕಂಬ ಸುತ್ತುವರಿದು ವಾರಕರ ಒಣಿಯ ಶಿವಾಜಿ ಸರ್ಕಲ ಮೂಲಕ ತುಳಜಾ ಭವಾನಿ ದೇವಸ್ಥಾನಕ್ಕೆ ಮುಕ್ತಾಯ ಮಾಡಲಾಯಿತು  ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.