ಕೊಪ್ಪಳದ‌ ಅಪರ್ಣಾ ಹೆಗಡೆ ತಂಡದಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ

ಕಲಬುರಗಿ,ಸೆ.23: ಕಲ್ಯಾಣ ಕರ್ನಾಟಕ ಅಮೃತ‌ ಮಹೋತ್ಸವ ಅಂಗವಾಗಿ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶುಕ್ರವಾರ ಸಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆದಿದ್ದು, ಕೊಪ್ಪಳದ‌ ಅಪರ್ಣಾ‌ ಹೆಗಡೆ ತಂಡವು ಅದ್ಭುತವಾಗಿ ಶಾಸ್ತ್ರೀಯ ನೃತ್ಯ ಪ್ರದರ್ಶನ ಮಾಡಿ ಸಭಿಕರ ಚಪ್ಪಾಳೆ ಗಿಟ್ಟಿಸಿತು.

ಬೀದರಿನ ರಾಣಿ ಸತ್ಯಮೂರ್ತಿ ತಂಡದಿಂದ ವಿವಿಧ‌ ದೇಶಭಕ್ತಿ ಗೀತೆಗಳಿಗೆ ನಡೆದ ಸಮೂಹ ನೃತ್ಯ ಎಲ್ಲರ‌ ಗಮನ ಸೆಳೆಯಿತು.

ಕಲಬುರಗಿಯ ಬಸವರಾಜ ಆಲಗೂಡ ಅವರಿಂದ ಗೀಗೀಪದ, ಅಪರ್ಣಾ ದೊಡ್ಡಮನಿ ಮತ್ತು ಸೂರ್ಯಕಾಂತ ಡುಮ್ಮ ಅವರಿಂದ ಸುಗಮ ಸಂಗೀತ, ಉಮಾ ಕುಲಕರ್ಣಿ ಅವರಿಂದ ದಾಸವಾಣಿ ಹಾಗೂ ಕಲಬುರಗಿಯ ಮಲ್ಲಿಕಾರ್ಜುನ ಮಣ್ಣೂರ ಇವರಿಂದ ದೇಶಭಕ್ತಿ ಗೀತೆ ಗಾಯನ‌ ಸಹ ನಡೆಯಿತು.