ಕೊಪ್ಪಳದಲ್ಲಿ ನಿರಂತರ ಶುಗರ್ ಪರೀಕ್ಷಿಸುವ ತಂತ್ರಜ್ಞಾನ ಲಭ್ಯ

ಕೊಪ್ಪಳ 25: ನಗರದ ಹಸನ್ ರಸ್ತೆಯ ಟ್ರಿನಿಟಿ ಶಾಲೆಯ ಹತ್ತಿರ ಇರುವ ಸಿಟಿ ಶುಗರ್ ಕ್ಲಿನಿಕ್ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಕೊಪ್ಪಳದಲ್ಲಿ ನೋವು ಇಲ್ಲದೇ ಕೈಗೆ ಚುಚ್ಚಿಕೊಳ್ಳದೇ ಸಕ್ಕರೆ ಕಾಯಿಲೆ ಶುಗರ್ ಪರೀಕ್ಷಿಸುವ ತಂತ್ರಜ್ಞಾನದ ಕೇಂದ್ರ ಲಭ್ಯವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಪಾಶ್ಚಿಮಾತ್ಯ ದೇಶದಲ್ಲಿದ್ದ ಇಂತಹ ವ್ಯವಸ್ಥೆಯ ಈಗ ಪ್ರಪ್ರಥಮ ಬಾರಿಗೆ ಕೊಪ್ಪಳಕ್ಕೆ ಬಂದಿರುವುದು ಒಳ್ಳೆಯದು. ಇದರಿಂದ ಸಕ್ಕರೆ ಕಾಯಿಲೆ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ತಂತ್ರಜ್ಞಾನ ಬಳಸಿ ನಮ್ಮ ರಕ್ತದಲ್ಲಿರುವ ಶುಗರ್‍ನ ಪ್ರಮಾಣವನ್ನು ಯಾವುದೇ ರೀತಿಯ ನೋವು ಇಲ್ಲದೇ ಪರೀಕ್ಷಿಸಬಹುದು. ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಇದರಿಂದ ಸಕ್ಕರೆ ಕಾಯಿಲೆಯಿಂದಾಗುವ ತೊಂದರೆಗಳನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯಬಹುದಾಗಿದೆ. ಈ ತಂತ್ರಜ್ಞಾನದಲ್ಲಿ ಒಂದು ಸೆನ್ಸಾರ್‍ನ್ನು ಸಕ್ಕರೆ ಕಾಯಿಲೆ ಇರುವವರ ತೋಳಿಗೆ ಅಳವಡಿಸಲಾಗುವುದು ಈ ಸೆನ್ಸಾರ್ ಅಳವಡಿಸಿದ ನಂತರ ಸುಮಾರು 10 ರಿಂದ 14 ದಿನಗಳ ವರೆಗೆ ತೋಳಿನಲ್ಲಿಯೇ ಇರುತ್ತದೆ. ನಾವು ನಮ್ಮ ದೈನಂದಿನ ಯಾವುದೇ ಚಟುವಟಿಕೆಗಳಿಗೆ ತೊಂದರೆ ಉಂಟು ಮಾಡುವುದಿಲ್ಲ. ಇದು ಸತತವಾಗಿ ನಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುತ್ತ ಅದನ್ನು ಶೇಖರಿಸಿ ಇಡುತ್ತದೆ. ಇದರಿಂದ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ನೀಡಲು ತುಂಬಾ ಅನುಕೂಲವಾಗುತ್ತದೆ. ಈ ಎಲ್ಲಾ ವ್ಯವಸ್ಥೆಯುಳ್ಳ ನಿರಂತರ ಶುಗರ್ ಪರೀಕ್ಷಿಸುವ ತಂತ್ರಜ್ಞಾನವನ್ನು ಇನ್ನೂ ಮುಂದೆ ನಮ್ಮ ಕೊಪ್ಪಳದ ಸಿಟಿ ಶುಗರ್ ಕ್ಲಿನಿಕ್‍ನಲ್ಲಿ ಆರಂಭಿಸಲಾಗಿದ್ದು, ತಪಾಸಣೆ ಪರೀಕ್ಷೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.9845732953 ಹಾಗೂ 9972432169 ಕ್ಕೆ ಸಂಪರ್ಕಿಸಬಹುದಾಗಿದೆ.