ಕೊಪ್ಪರದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ

ದೇವದುರ್ಗ.ಜ.೦೭-ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಜಿಪಂ, ತಾಪಂ, ಡಾನ್ ಬೋಸ್ಕೋ ಸಮಾಜ ಸೇವಾ ಸಂಸ್ಥೆ, ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಆಂದೋಲನ ಯೋಜನೆಯಿಂದ ವಿಶೇಷ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಗುರುವಾರ ನಡೆಯಿತು.
ಪಿಡಿಒ ಮಹಿಬೂಬ್ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಮಕ್ಕಳಿಗೆ ಶಿಕ್ಷಣ, ಉತ್ತಮ ಆಹಾರ ಒದಗಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಪಾಲಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಎಎಸ್‌ಐ ಸಾದೀಕ್ ಪಾಷಾ, ಕಂಟ್ರೂಲರ್ ವರದಾಚಾರ್ಯ, ಆರೋಗ್ಯ ಇಲಾಖೆ ಸೌಭಾಗ್ಯ, ಸಿಆರ್‌ಪಿ ಅಂಬಣ್ಣ ಮುಡಾಳ, ನಾಗರಾಜ ಯಾಟಗಲ್, ಗೂಳಪ್ಪ ಶಿಕ್ಷಕರು, ಮುಖ್ಯಶಿಕ್ಷಕ ಶರಣಪ್ಪ, ಕಲ್ಲಪ್ಪ ಅರಸಿಣಿಗಿ, ವಿನಾಯಕಮೂರ್ತಿ, ಎಚ್.ಎಂ.ಭಜಂತ್ರಿ ಇತರರಿದ್ದರು.

೦೭-ಡಿವಿಡಿ-೩