ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸಲು ಪ್ರಯತ್ನ


ಸಂಜೆವಾಣಿ ವಾರ್ತೆ
ಕುರುಗೋಡು.ನ.22  ಕಂಪ್ಲಿಕ್ಷೇತ್ರದ ಎಲ್ಲಾ ಗ್ರಾಮೀಣ ಪ್ರದೇಶದ ಕೊನೆಭಾಗದ ರೈತರ ಜಮೀನುಗಳಿಗೆ ಹೆಚ್‍ಎಲ್‍ಸಿ ಹಾಗು ಎಲ್‍ಎಲ್‍ಸಿ ಕಾಲುವೆ ಮೂಲಕ ಸಂಕಷ್ಟವಿಲ್ಲದೆ ನೀರು ಪೂರೈಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಂಪ್ಲಿಕ್ಷೇತ್ರದ ಶಾಸಕ ಜೆಎನ್.ಗಣೇಶ ಭರವಸೆ ನೀಡಿದರು.
ಅವರು ಸಮೀಪದ ಸೋಮಸಮುದ್ರ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಕಂಪ್ಲಿಕ್ಷೇತ್ರದಲ್ಲಿ ಜನರ ಪ್ರೀತಿ, ವಿಶ್ವಾಸದಿಂದ ಗೆದ್ದವರು ಶಾಸ್ವತವಾಗಿರುತ್ತಾರೆ, ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನಮ್ಮಮೇಲೆ ಇರಲಿ ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ದ ಎಂದು ನುಡಿದರು.
ಮಾಜಿ ವಿಧಾನಪರಿಷತ್ ಸದಸ್ಯ ಕೆಎಸ್‍ಎಲ್.ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಲಬಡಿಸಲು  ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು, ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಾಡಿದ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇತರೆ ಅಭಿವೃದ್ದಿಕಾರ್ಯಕ್ರಮಗಳೇ ಕಾಂಗ್ರೆಸ್ ಗೆಲುವಿಗೆ ಕಾರಣವಾಗುತ್ತಿದೆ ಎಂದು ನುಡಿದರು.
ಪಕ್ಷದ ಮುಖಂಡ  ಪಂಚಣ್ಣ ನಿರೂಪಿಸಿದರು. ಮುಖಂಡ ತಿಪ್ಪೇಸ್ವಾಮಿ ಕೊನೆಯಲ್ಲಿ ವಂದಿಸಿದರು.
ವೇದಿಕೆಯಲ್ಲಿ ಬ್ಲಾಕ್ ಅದ್ಯಕ್ಷ ಬಂಗಿಮಲ್ಲಯ್ಯ, ಕಗ್ಗಲ್ಲುವೀರೇಶಪ್ಪ, ಅಂಜೀನಪ್ಪ, ಆರ್.ನಾರಾಯಣರೆಡ್ಡಿ, ವಿಎನ್.ಮಲ್ಲಿಕಾರ್ಜುನ, ಪಿ.ರಮೇಶ, ದ್ಯಾವಣ್ಣ,  ಈಶ್ವರಗೌಡ, ಎಂ.ಮಂಜುನಾಥ, ಓಂಕಾರೆಪ್ಪ, ಚಾನಾಳುಆನಂದ, ವೆಂಕಟೇಶಗೌಡ, ಸಿ.ಷಣ್ಮುಖ, ಸೇರಿದಂತೆ ಕುರುಗೋಡು ತಾಲೂಕಿನ ವಿವಿದ ಗ್ರಾಮಗಳ ಕಾಂಗ್ರೆಸ್ ಮುಖಂಡರು, ಮತ್ತು ಕಾರ್ಯಕರ್ತರು ಇದ್ದರು.