ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲ

ಸಿರವಾರ,ಮಾ.ಂ೧- ಬೇಸಿಗೆ ಬೆಳೆಗೆ ಐಸಿಸಿ ಸಭೆಯ ತೀರ್ಮಾನದಂತೆ ಕೊನೆ ಭಾಗಕ್ಕೆ ನೀರು ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಎರಡು ದಿನದಲ್ಲಿ ಕೊನೆ ಭಾಗಕ್ಕೆ ನೀರು ಬಾರದಿದ್ದರೆ ರೈತರೊಂದಿಗೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಯುವ ಮುಖಂಡ ಕೆ.ಶರಣಯ್ಯನಾಯಕ ಗುಡದಿನ್ನಿ ಹೇಳಿದರು.
ಸಂಜೆವಾಣಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ಬೇಸಿಗೆ ಬೆಳೆಗೆ ೩೨೦೦ ಬಿಡುವುದಕ್ಕೆ ಒಪ್ಪಿಕೊಂಡಿರುವುದೆ ತಪ್ಪು ನಿರ್ಣಯವಾಗಿದೆ. ಬೇಸಿಗೆ ಬೆಳೆಗೆ ೪೦೦೦ ಕ್ಯೂಸೆಕ್ ನೀರು ಹರಿಸಬೇಕು. ಜಲಾಶಯದಿಂದ ನಾಲೆಗೆ ಬಿಡುವ ನೀರು ಮೇಲ್ಭಾಗದವರೆ ಹೆಚ್ಚು ಪಡೆಯುತ್ತಿದ್ದಾರೆ. ಮೇಲ್ಭಾಗದ ಜನಪ್ರತಿನಿಧಿಗಳ ಕೈಗೊಂಬೆಯಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇದರಿಂದ ನಮಗೆ ನೀರು ಬರುತ್ತಿಲ್ಲ. ನಮ್ಮ ಭಾಗದ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ನೀರು ತರುವಲಿ ವಿಪಲರಾಗಿದ್ದಾರೆ. ಮೂರು ಬಾರಿ ರಸ್ತಾರೋಕ ಮಾಡಿದಾಗಲೂ ನೀರು ಕೊಡುವ ಭರವಸೆಯನ್ನು ನೀಡಿದರೂ ನೀರು ಬರುತ್ತಿಲ್ಲ. ಪ್ರತಿಭಟನೆ ಮಾಡಿದಾಗ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಶಾಸಕರು ಅನೇಕ ದಿನಗಳ ನೀರು ಬರುತ್ತವೆ ಎಂದು ನಾಲೆಯ ಮೇಲೆ ತೆರಳಿ ಫೋಟೊ ಹಾಕುವುದು ಬಿಟ್ಟರೆ ಕೊನೆ ಭಾಗಕ್ಕೆ ನೀರು ತಂದಿಲ್ಲ.
ಕೆಳಭಾಗದ ರೈತರ ಹಿಂಗಾರು ಬೆಳೆಗಳು ನೀರು ಇಲ್ಲದೆ ಒಣಗುತ್ತಿವೆ. ಈಗಾಗಲೇ ಒಂದು ಎಕರೆಗೆ ಮೂವತ್ತು ಸಾವಿರ ರೂಪಾಯಿ ಅಧಿಕ ಪ್ರಮಾಣದಲ್ಲಿ ವೆಚ್ಚಮಾಡಲಾಗಿದೆ. ರೈತರು ಸಾಲಮಾಡಿದ್ದಾರೆ, ಸರಿಯಾದ ಬೆಳೆ ಬಾರದೆ ನಷ್ಟವಾದರೆ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸಂಕಷ್ಟ ಎದುರಾಗಿದೆ. ಎರಡು ದಿನದಲ್ಲಿ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಬಾರದಿದ್ದಲ್ಲಿ ಸಾವಿರಾರು ರೈತರೊಂದಿಗೆ ಸಿರವಾರ ಪಟ್ಟಣದ ಮಾನ್ವಿ ಕ್ರಾಸ್‌ನಲ್ಲಿ ರಸ್ತೆತಡೆ ಮಾಡಲಾಗುವದು ಎಂದಿದ್ದಾರೆ.