ಕೊನೆಯ ದಿನದ ಖರೀದಿಗೂ ಆತುರ ಅಗತ್ಯವಸ್ತು ಸೇರಿದಂತೆ ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ

ಹೊಸಪೇಟೆ ಜೂ1 : ಕರೋನಾ ಮಹಾಮಾರಿಯ ಲಾಕ್‍ಡೌನ್ ಮುಂದಿನ 6 ದಿನಗಳ ನಿರ್ಭಂದದ ಹಿನ್ನೆಲೆಯಲ್ಲಿ ಇಂದು ಖರೀದಿಗೆ ನೀಡಿದ ಅವಕಾಶದ ಕೊನೆದಿನವೂ ಅಗತ್ಯವಸ್ತುಗಳು ಸೇರಿದಂತೆ ಹಣ್ಣು ತರಕಾರಿಗಳ ಖರೀದಿಗೆ ಜನ ಮುಗಿಬೀಳುವದು ಮುಂದುವರೆದಿತು.
ಇನ್ನು ನಾಳೆಯಿಂದ ಬಳ್ಳಾರಿ ಜಿಲ್ಲಾಡಳಿತ ವಿಜಯನಗರ ಜಿಲ್ಲೆಯನ್ನು ಒಳಗೊಂಡಂತೆ ಬ್ಯಾಂಕ್ ಮತ್ತು ಆರ್ಥಿಕ ಚಟುವಟಿಕೆಯನ್ನು ನಡೆಸುವ ಎಲ್ಲಾ ವ್ಯವಹಾರಗಳಿಗೂ ನಿರ್ಭಂದ ಹಾಕಿರುವುದರ ಪರಿಣಾಮ ಬ್ಯಾಂಕ್‍ಗಳು ಹಾಗೂ ಸಹಕಾರಿ ಸಂಘಗಳ ಕಚೇರಿಗಳ ಮುಂದೆಯೂ ಜನಸಾಗರ ಜಮಾವಣೆಗೊಂಡಿತು.
ಜನಜಂಗುಳಿ ಕಾಣದಂತೆ ಅಗತ್ಯವಸ್ತುಗಳನ್ನು ಖರೀದಿಸಲು ಬರುವವರಿಗೆ ವಾಹನ ನಿಲುಗಡೆ, ಏಕಮುಖ ಸಂಚಾರ ಸೇರಿದಂತೆ ಪ್ರತೇಕ ವಲಯಗಳು ಹಾಗೂ ಹಣ್ಣು ತರಕಾರಿ ಸೇರಿದಂತೆ ದಿನಸಿ ಖರೀದಿಗೂ ಪ್ರತೇಕ ಸ್ಥಳಗಳನ್ನು ಮಾಡಿದ್ದರೂ ಸಾರ್ವಜನಿಕರು ಖರೀದಿಯ ಭರದಲ್ಲಿ ಎಲ್ಲವನ್ನು ಮರೆತು ಖರೀದಿಗೆ ದುಂಬಾಲು ಬಿದ್ದರುವುದು ಕಂಡುಬಂತು.
ಇನ್ನು ರಸ್ತೆಯಲ್ಲಿ ಅನಗತ್ಯವಾಗಿ ತಿರುಗುವ ಹಾಗೂ ಮಕ್ಕಳೊಂದಿಗೆ ಬಂದವರಿಗೆ ಬಿಸಿ ಮುಟ್ಟಿಸುವ ಕೆಲಸವೂ ಪೊಲೀಸರಿಂದ ಇಂದು ಸಹ ಮುಂದುವರೆದಿದ್ದು