ಕೊನೆಭಾಗಕ್ಕೆ ನೀರು ತಲುಪಿಸಿದ ಕಾಡಾ ಅಧ್ಯಕ್ಷರಿಗೆ ಗ್ರಾಮಸ್ಥರ ಸನ್ಮಾನ

ದಾವಣಗೆರೆ.ಏ.೧೬; ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕೊನೆಯ ಭಾಗಗಳಾದ ತ್ಯಾವಣಗಿ ಹಾಗೂ ಕುಕ್ಕವಾಡ ಗ್ರಾಮಕ್ಕೆ ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಭೇಟಿ ನೀಡಿದರು.ಭೇಟಿಯಲ್ಲಿ ಸಂದರ್ಭದಲ್ಲಿ ಗ್ರಾಮದ ಸಮಸ್ತ ರೈತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಲಾಯಿತು.ಸಭೆಯ ಆರಂಭದಲ್ಲಿ ಗ್ರಾಮದ ರೈತರು ಮಾತನಾಡುತ್ತಾ ಸಾಕ್ಷಾತ್ ಗಂಗಾ ಮಾತೆಯ ಅಪರಾವತಾರ ದಂತೆ ಅಧ್ಯಕ್ಷರು ನಮಗೆ ಭಾಸವಾಗುತ್ತಿದ್ದಾರೆ. 1980ನೇ ಇಸವಿಯಲ್ಲಿ ಆರಂಭವಾದ ಅಚ್ಚುಕಟ್ಟು ಪ್ರಾಧಿಕಾರವು ಹಲವಾರು ಅಧ್ಯಕ್ಷರನ್ನು ಕಂಡಿದೆ, ಆದರೆ ಕೊನೆಯ ಭಾಗಕ್ಕೆ ನೀರು ತಲುಪಿಸುವಲ್ಲಿ ಯಾವ ಅಧ್ಯಕ್ಷರು ಗೆದ್ದಿರಲಿಲ್ಲ ನೀವು ಈ ಪರಂಪರೆಯ ಕೊಂಡಿಯನ್ನು ಕಳಚಿ, ಕಾಡಾಗೆ ಅಂಟಿದ್ದ ಆರೋಪವನ್ನು ದೂರ ಮಾಡಿ ನೀರು ಕೊಟ್ಟಿದ್ದೀರಾ ನಿಮಗೆ ನಾವು ಸದಾ ಚಿರಋಣಿ ಎಂದರು.
ಪ್ರತಿವರ್ಷ ನೀರು ಪಡೆಯಬೇಕು ಎಂದರೆ ಸಾಕಷ್ಟು ಗದ್ದಲ, ಹೋರಾಟ ಮಾಡುವ ಮೂಲಕ ನೀರು ಪಡೆದುಕೊಳ್ಳುತ್ತಿದ್ದೇವು, ರಾತ್ರಿ ಹಗಲು ನಿದ್ದೆಗೆಟ್ಟು ಚಾನೆಲ್ ಮೇಲೆ ಓಡಾಡಿಕೊಂಡು ನೀರು ಹಾಯಿಸಿ ಕೊಳ್ಳಬೇಕಾಗಿತ್ತು ಆದರೆ ನೀವು ಅಧ್ಯಕ್ಷರಾದ ಮೇಲೆ ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಒಬ್ಬ ಹೋರಾಟಗಾರ್ತಿಯನ್ನು ಗುರುತಿಸಿ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷ ಗಾದಿಗೆ ನೇಮಕ ಮಾಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ, ನಿಮ್ಮ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದು ಒಕ್ಕೊರಲಿನಿಂದ ಕರತಾಡನ ಪ್ರದರ್ಶಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಕಾರಿಗನೂರು ಜಿಲ್ಲಾ ಪಂಚಾಯತ್ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ ಮಲೆಬೆನ್ನೂರು ನೀರಾವರಿ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಕೊನೆಯ ಭಾಗಕ್ಕೆ ನೀರು ಕೊಟ್ಟೆ ಕೊಡುತ್ತೇನೆ ಎಂದು ವಾಗ್ದಾನ ಮಾಡಿದಾಗ ಇದು ಅಪ್ಪಟ ಅನಾನುಭವಿ ತನದ ಹೇಳಿಕೆ ಎಂದು ಮನಸ್ಸಿನಲ್ಲಿ ಅಂದು ಕೊಂಡಿದ್ದೇವು, ಪುರುಷರು ಅಧ್ಯಕ್ಷ ಗಾದಿಯಲ್ಲಿ ಕುಳಿತಾಗ ಆಗದಿದ್ದ ಕೆಲಸ ಈಗ ಆಗಲು ಸಾಧ್ಯವಾ ಎಂದು ಆಶ್ಚರ್ಯ ಪಟ್ಟಿದ್ದೇವು, ಈಗ ನಂಬಲು ಸಾಧ್ಯವಾಗದ ರೀತಿಯಲ್ಲಿ ಕಳೆದ 20ವರ್ಷಗಳಲ್ಲಿ ತಲುಪದಿದ್ದ ನಾಲೆಗಳಲ್ಲಿ ನೀರು ಹರಿಯುತ್ತಿದೆ ಎಂದರು.ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರು ಅಚ್ಚುಕಟ್ಟು ಭಾಗದ ರೈತರು ಪಕ್ಷಾತೀತವಾಗಿ ಪವಿತ್ರ ರಾಮಯ್ಯ ಅವರೇ ಕಾಡಾ ಅಧ್ಯಕ್ಷರಾಗಿ ಬರಲಿ ಎಂದು ಒತ್ತಾಯಿಸುತ್ತೇವೆ ಎಂದರು.
ಅವರ ಪ್ರತಿಯೊಂದು ಮಾತಿನಲ್ಲೂ ರಾಜಕೀಯ ಅಡಗಿರದೆ ಅನ್ನದಾತರಿಗೆ ಅನುಕೂಲವಾಗಬೇಕು ಎಂಬ ಧೋರಣೆ ನಮಗೆಲ್ಲ ಹೃದಯ ತುಂಬಿ ಬಂದಿದೆ ಎಂದರು. ಅವರ ಪ್ರತಿಯೊಂದು ಪದದಲ್ಲೂ ಹೋರಾಟದ ಚಾಕಚಕ್ಯತೆ ಎದ್ದು ಕಾಣುತ್ತದೆ, ಎಷ್ಟೋ ಬಾರಿ ಅವರ ಭಾಷಣ ಕೇಳಿದಾಗ ಕೃಷಿ, ಜಲ ಸಂಪನ್ಮೂಲ ಅಥವಾ ಗೃಹ ಸಚಿವರು ಮಾತನಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ, ರೈತರಿಗಾಗಿ ತಮ್ಮ ಬಹುಪಾಲು ಜೀವನವನ್ನು ವ್ಯಹಿಸಿರುವ ಇಂತಹ ಹೋರಾಟಗಾರರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಭದ್ರಾ ನೀರು ಬಳಕೆದಾರರ ಮಹಾ ಮಂಡಳ ಅಧ್ಯಕ್ಷರಾದ ದ್ಯಾವಪ್ಪ ರೆಡ್ಡಿ, ಅಧೀಕ್ಷಕ ಅಭಿಯಂತರರಾದ ಚಂದ್ರಹಾಸ್, ಕಾರ್ಯಪಾಲಕ ಅಭಿಯಂತರರಾದ ಮಲ್ಲಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ರೇವಣ ಸಿದ್ದಪ್ಪ, ಗ್ರಾಮದ ಪ್ರಮುಖರಾದ ದಿನೇಶ್, ಮಂಜುನಾಥ್ ಮುಂತಾದ ಹಲವರು ಉಪಸ್ಥಿತರಿದ್ದರು.