ಕೊನೆತನಕ ಉದ್ದವ್ ಜೊತೆಗಿರುತ್ತೇವೆ: ಅಜಿತ್ ಪವಾರ್

ಮುಂಬೈ, ಜೂ.23- ಮಹಾರಾಷ್ಟ್ರದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೊನೆ ಗಳಿಗೆಯ ತನಕ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜೊತೆಗಿರುತ್ತೇವೆ ಎಂದು ಮಹಾ ಆಗಾಢಿ ಮಿತ್ರಗಳಲ್ಲಿ ಒಂದಾದ ಎನ್ ಸಿಪಿ ಹೇಳಿದೆ.

ಪಕ್ಷದ ವರಿಷ್ಠ ಶರದ್ ಪವಾರ್ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಮಿತ್ರ ಪಕ್ಷವಾಗಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ತೆಗೆದುಕೊಳ್ಳುವ ಅಂತಿಮ ನಿರ್ದಾರದ ತನಕ ಜೊತೆಗಿರಲು ಎನ್ ಸಿಪಿ ಒಕ್ಕೊರಲ‌ ನಿರ್ಧಾರ ಕೈಗೊಂಡಿದೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಅವರು, ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಯನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕೊನೆತನಕ ಮುಖ್ಯಮಂತ್ರಿ ಜೊತೆಗಿರಲು ಪಕ್ಷ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಸರ್ಕಾರದ ಭಾಗವಾಗಿರುವ ಶಿವಸೇನೆಯಲ್ಲಿ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಮೇಲೆ ಸಂಪೂರ್ಣ ನಂಬಿಕೆ ಅವರು ಕೈಗೊಳ್ಳುವ ಅಂತಿಮ ನಿರ್ಧಾರ ವರೆಗೂ ಪಕ್ಷದ ಇರಲಿದೆ ಎಂದು ಅವರು ಹೇಳಿದ್ದಾರೆ‌.

ಅಸ್ಸಾಂನಲ್ಲಿ ಬೇರುಬಿಟ್ಟಿರುವ ಶಿವಸೇನೆಯ ಶಾಸಕರು ಮರಳಿ ಮುಂಬೈಗೆ 24 ಗಂಟೆಯಲ್ಲಿ ಬಂದರೆ ಕಾಂಗ್ರೆಸ್- ಎನ್ ಸಿಪಿ ಜೊತೆಗಿನ ಮೈತ್ರಿ ಕಡಿತ ಮಾಡಿಕೊಳ್ಳುವುದಾಗಿ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿಕೆ ನೀಡಿದ ಕೆಲವೇ ಸಮಯಗಳ ಅಂತರದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ‌.

ಕಾಂಗ್ರೆಸ್ ಎನ್ ಸಿಪಿ ಮೈತ್ರಿ ಬಿಟ್ಟು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡುವಂತೆ ಆಗ್ರಹಿಸಿ ಶಿವಸೇನೆಯ ಉಚ್ಚಾಟಿತ ಶಾಸಕಾಂಗ ಪಕ್ಷದ ನಾಯಕ ಏಕಮಾಥ್ ಶಿಂದೆ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಶಾಸಕರೂ ಅಸ್ಸಾಂ ಗುವಹಟಿಯ ಪಂಚತಾರಾ ಹೋಟೆಲ್ ನಲ್ಲಿ ಬೀಡು ಬಿಟ್ಟಿದ್ದಾರೆ.