ಕೊನೆಗೂ ಮಾಲೀಕರ ಮನೆ ಸೇರಿದ ಆಫ್ರಿಕನ್ ಗಿಣಿ

ತುಮಕೂರು, ಜು. ೨೩- ಇಲ್ಲಿನ ಜಯನಗರದಲ್ಲಿನ ಮನೆಯಿಂದ ಕಳೆದ ವಾರ ಕಾಣೆಯಾಗಿದ್ದ ಆಫ್ರಿಕನ್ ಗಿಣಿ ಕೊನೆಗೂ ತನ್ನ ಮಾಲೀಕರ ಕೈ ಸೇರಿದೆ.
ಹುಡುಕಿ ಕೊಟ್ಟವರಿಗೆ ಮೊದಲಿಗೆ ೫೦ ಸಾವಿರ ರೂ., ಬಹುಮಾನ ಪ್ರಕಟಿಸಿದ್ದ ಮಾಲೀಕರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಅರ್ಜುನ್ ಕುಟುಂಬದವರು ಬಹುಮಾನದ ಮೊತ್ತವನ್ನು ಏರಿಸಿದ್ದರು. ಇದೀಗ ಹುಡುಕಿ ಕೊಟ್ಟವರಿಗೆ ೮೫ ಸಾವಿರ ರೂ. ಬಹುಮಾನ ನೀಡಿದ್ದಾರೆ.
ಜಯನಗರ ಬಡಾವಣೆಯಲ್ಲಿ ವಾಸವಿರುವ ಕುಟುಂಬ ಪ್ರತಿ ವರ್ಷ ಎರಡು ಗಿಣಿಗಳ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುತ್ತಿತ್ತು. ಅದರಲ್ಲಿ ಒಂದು ಗಿಣಿ ವಾರದ ಹಿಂದೆಯಷ್ಟೇ ಕಾಣೆಯಾಗಿತ್ತು. ಕಾಣೆಯಾದ ಗಿಣಿಗಾಗಿ ಮಾಲೀಕರು ಹಗಲು ರಾತ್ರಿ ಎನ್ನದೇ ಸುತ್ತಮುತ್ತಲ ಬಡಾವಣೆಗಳಲ್ಲಿ ಹುಡುಕಾಟ ನಡೆಸಿದ್ದರು. ಅಲ್ಲದೆ ನಗರದೆಲ್ಲೆಡೆ ಬ್ಯಾನರ್ ಗಳನ್ನು ಕಟ್ಟಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ್ದರು. ನಿನ್ನೆ ಸಂಜೆ ಸಂಜೆ ವ್ಯಕ್ತಿಯೊಬ್ಬರಿಗೆ ಗಿಣಿ ಸಿಕ್ಕಿದ್ದು, ಅದನ್ನು ಮಾಲೀಕರಿಗೆ ಒಪ್ಪಿಸಿ ಬಹುಮಾನ ಪಡೆದಿದ್ದಾರೆ.