ಕೊನೆಗೂ ಬೋನಿಗೆ ಬಿದ್ದ ನರಭಕ್ಷಕ ಚಿರತೆ

ಸಂಜೆವಾಣಿ ವಾರ್ತೆ
ಹನೂರು: ಜು.16:- ಕಳೆದ 16 ದಿನಗಳಿಂದ ಕಾರ್ಯಾಚರಣೆಯಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಬಳಿಯ ಸಿದ್ದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿ ಚಿರತೆಯೊಂದು ಬಿದ್ದಿದೆ.
ಇದು ಹನೂರು ತಾಲ್ಲೂಕಿನ ಕಗ್ಗಲಿಗುಂದಿಯಲ್ಲಿ ಬಾಲಕಿ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ರೈತರೊಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯೇ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.
ದಾಳಿ ಮಾಡಿದ್ದ ಚಿರತೆಯ ಸೆರೆ ಅರಣ್ಯ ಇಲಾಖೆ 16 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ಚಿರತೆ ಕಗ್ಗಲಿಗುಂದಿ ಮತ್ತು ಮೇಡಳ್ಳಿ ಹಿನೀರು ಪ್ರದೇಶ , ಕಂಚಗಳ್ಳಿ ಪ್ರದೇಶದಿಂದ ಹೊರ ಹೋಗಿದ್ದು, ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಓಡಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು. ಮಧುವನಹಳ್ಳಿಯ ಸಿದ್ದೇಶ್ವರಬೆಟ್ಟದಲ್ಲಿ ಚಿರತೆಯೊಂದು ಒಡಾಡುತ್ತಿರುವ ವಿಡಿಯೊ ತುಣುಕು ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿತ್ತು. ಬಾಲಕಿ ಮತ್ತು ರೈತನ ಮೇಲೆ ದಾಳಿ ನಡೆಸಿದ್ದ ಚಿರತೆ ಇದಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದರು.
ಕಾರ್ಯಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಆಯಕಟ್ಟಿನ ಹಲವು ಕಡೆಗಳಲ್ಲಿ ಬೋನುಗಳನ್ನು ಅಳವಡಿಸಿದ್ದರು. ಇದರ ಜತೆಗೆ ಅದರ ಚಲನವಲನಗಳ ಅಧ್ಯಯನಕ್ಕಾಗಿ ಕ್ಯಾಮೆರಾಗಳನ್ನು ಅಳವಡಿಸಿತ್ತು.
ಬೋನಿಗೆ ಬಿದ್ದ ಚಿರತೆ ಶನಿವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದ. ಭಾನುವಾರ ಮುಂಜಾನೆ ಗಸ್ತಿನಲ್ಲಿದ್ದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬಾಲಕಿ ಸಾವು:
ಕಗ್ಗಲಿಗುಂದಿ ಆದಿವಾಸಿ ಪೆÇೀಡಿನಲ್ಲಿ ಚಿರತೆ ದಾಳಿಯಿಂದ ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಚಿಕ್ಕಮಾಲಪುರ ಗ್ರಾಮ ಪಂಚಾಯಿತಿ ಕಗ್ಗಲಿಗುಂದಿ ಆದಿವಾಸಿಗಳ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ರಾತ್ರಿ 8:30 ರ ಸಮಯದಲ್ಲಿ ಅದೇ ಗ್ರಾಮದ ರಾಮ ಲಲಿತಾ ದಂಪತಿಯ ಎರಡನೇ ಪುತ್ರಿ ಸುಶೀಲ ಎಂಬ 6 ವರ್ಷದ ಬಾಲಕಿಯು ತನ್ನ ಮನೆಯ ಮುಂದೆ ಇರುವ ಸಮಯದಲ್ಲಿ ಚಿರತೆ ದಾಳಿ ನಡೆಸಿ ಕಾಡಿನೊಳಗೆ ಎಳೆದೊಯ್ಯಲು ಪ್ರಯತ್ನಿಸಿದೆ.
ಆಟ ಆಡುತಿದ ಮಗಳು ಇಲ್ಲಾ ಎಂದು ನೋಡಿದಾಗ ಆ ಸ್ಥಳದಲ್ಲಿ ಸುರಿದಿದ್ದ ರಕ್ತದ ಕಲೆಗಳನ್ನು ನೋಡಿ ಶಬ್ಧ ಮಾಡಿ ಗ್ರಾಮದ ಎಲ್ಲರೂ ಜೋರಾಗಿ ಕೂಗಿ ಕೊಂಡಾಗ ಕಾಡಿಗು ಗ್ರಾಮಕೂ ಮಧ್ಯ ತೊಡಲಾಗಿದ್ದ ಆನೆಯ ಗುಂಡಿಯೊಳಗೆ ಮಗುವನ್ನು ಬಿಟ್ಟು ಚಿರತೆ ಕಾಡಿನ ಒಳಗೆ ಓಡಿಹೋಗಿದೆ.
ನಂತರ ಗ್ರಾಮದವರೆಲ್ಲ ಸೇರಿ ಆಂಬುಲೆನ್ಸ್ ಮೂಲಕ ಸಮೀಪದ ಕಾಮಗೆರೆಯ ಹೋಲಿ ಕ್ರಾಸ್ ಹಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ,ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ 20 ದಿನಗಳಿಂದ ಚಿಕಿತ್ಸೆ ಪಡೆಯುತಿದ್ದ 6 ವರ್ಷದ ಬಾಲಕಿ ಶುಶೀಲಾ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಎಂ.ಆರ್ ಮಂಜುನಾಥ್ ಸಾಂತ್ವನ :
ಚಿಕ್ಕಮಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಗ್ಗಲಿ ಗುಂದಿ ಗ್ರಾಮಕ್ಕೆ ಎಂ ಆರ್ ಮಂಜುನಾಥ್ ಅವರು ಭೇಟಿ ನೀಡಿ ಚಿರತೆ ದಾಳಿಗೆ ತುತ್ತಾದ ಮಗು ಸುಶೀಲಾ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಈ ವೇಳೆ ಪತ್ರಿಕೆಯೊಡನೆ ಮಾತನಾಡಿದ ಶಾಸಕರು ಬಾಲಕಿಯ ಸಾವು ದುರದೃಷ್ಟ ಕರ ಸಂಗತಿಯಾಗಿದೆ, ಚಿಕಿತ್ಸೆ ಪಲಕಾರಿಯಾಗದೆ ಸವನ್ನಪಿದೆ ಎಂದು ಕಂಬನಿ ಮಿಡಿದರು. ಇನ್ನೂ ಮೃತ ಕುಟುಂಬಕ್ಕೆ ಸರ್ಕಾರ ದಿಂದ ದೊರೆಯುವ 5ಲಕ್ಷ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.