ಕೊನೆಗೂ ಬೆಂಗಳೂರಿಗೆ ತಂಪೆರಚಿದ ಮಳೆ..!

ಬೆಂಗಳೂರು, ಮೇ.3-ದಾಖಲೆಯ ತಾಪಮಾನದಿಂದ ತತ್ತರಿಸಿ ಹೋಗಿದ್ದ ಬೆಂಗಳೂರಿಗರಿಗೆ ಮಧ್ಯಾಹ್ನ ಮಳೆರಾಯ ತಂಪೆರಚಿದ್ದಾನೆ. ಇದರಿಂದ ನೀರಿಲ್ಲದೇ ಬವಣೆ ಪಡುತ್ತಿದ್ದ ಬೆಂಗಳೂರಿಗರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಜಯನಗರ, ಜೆಪಿ ನಗರ, ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಬ್ಬನ್ ಪಾರ್ಕ್, ವಿಧಾನಸೌಧ, ಶಾಂತಿನಗರ, ಕೆಆರ್ ಪುರಂ, ಪೀಣ್ಯ, ದಾಸರಹಳ್ಳಿ, ಬಾಗಲಕುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.

ಇನ್ನೊಂದೆಡೆ, ಸಾಧಾರಣ ಮಳೆಗೆ ನಗರದ ಹಲವು ಕಡೆ ರಸ್ತೆಗಳು ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಹಲವು ಕಡೆಗಳಲ್ಲಿ ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಇಷ್ಟು ಸಮಯ ಸಿಕ್ಕರೂ ಸಮಸ್ಯೆ ಸರಿಪಡಿಸಲು ಮುಂದಾಗದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ವಾರದವರೆಗೂ ಮಳೆಯಾಗುವ ಸೂಚನೆಯಿದೆ. ಹವಾಮಾನ ವರದಿ ಪ್ರಕಾರ ಬೆಂಗಳೂರು, ಉಡುಪಿ, ತುಮಕೂರು ಮುಂತಾದ ಕಡೆ ಮುಂದಿನ ವಾರ ಮಳೆಯಾಗುವ ಸಾಧ‍್ಯತೆಯಿದೆ. ಇನ್ನಾದರೂ ಬೆಂಗಳೂರನ ನೀರಿನ ಬವಣೆ ಮುಗಿಯಲಿ ಎನ್ನುವುದು ಜನರ ಆಶಯ.