ಕೊನೆಗೂ ಚೇತರಿಸಿಕೊಳ್ಳದ ಹಿರಿಯ ನಟ :ಶರತ್ ಬಾಬು ಇನ್ನಿಲ್ಲ : ಚಿತ್ರರಂಗ ಕಂಬನಿ

ಹೈದರಾಬಾದ್, ಮೇ.22- ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನ ಸೂರೆಗೊಂಡಿದ್ದ ಬಹುಭಾಷಾ ಶರತ್ ಬಾಬು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಬಹು ದಿನಗಳಿದ ಬಹು ಅಂಗಾಂಗ ಸಮಸ್ಯೆಯಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು‌. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಅಮೃತವರ್ಷಿಣಿ ಚಿತ್ರದಲ್ಲಿ ನಟಿಸಿದ್ದ ಶರತ್ ಬಾಬು ಖ್ಯಾತಿ ಪಡೆದಿದ್ದರು. ಕನ್ನಡದಲ್ಲಿ ತುಳಸಿದಳ, ರಣಚಂಡಿ, ಶಕ್ತಿ, ಗಾಯ, ಹೃದಯ- ಹೃದಯ ನೀಲ , ನಮ್ಮೆಜಮಾನರು ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು

1973ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಶರತ್ ಬಾಬು ಅವರು . ಕನ್ನಡದ ಜೊತೆಗೆ ತೆಲುಗು ತಮಿಳು ಮಲಯಾಳಂ ಚಿತ್ರರಂಗದಲ್ಲೂ ಕಮಾಲು ಮಾಡಿದ್ದರು. ಜೊತೆಗೆ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದರು

ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಕಮಲಹಾಸನ್ ಸೇರಿದಂತೆ ಘಟಾನುಘಟಿ ನಾಯಕ ನಟರ ಜೊತೆ ನಟಿಸಿದ ಹಿರಿಮೆ ಶರತ್ ಬಾಬು ಅವರದು.

ಅನಾರೋಗ್ಯಕ್ಕೆ ಒಳಗಾಗಿದ್ದ ಶರತ್ ಬಾಬು ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು ಆನಂತರ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ಚಿತ್ರರಂಗ ಕಂಬನಿ

ಬಹುಭಾಷಾ ನಟ ಶರತ್ ಬಾಬು ನಿಧನಕ್ಕೆ ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ