ಕೊನಾಪುರ ಶರಣಬಸವೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಕುಕನೂರು.ಮಾ,31- ತಾಲೂಕಿನ ಕೊನಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ರಥೋತ್ಸವ ಶನಿವಾರ  ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರ ಧಾರ್ಮಿಕ ಕಾರ್ಯಕ್ರಮ ಮತ್ತು ಜಾತ್ರೆಯ ನಿಮಿತ್ತ ಉಚಿತ ಸಾಮೂಹಿಕ ಮದುವೆಗಳು ನಡೆದವು. ಬೆದವಟ್ಟಿ ಹಿರೇಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು ವರರಿಗೆ ಆಶೀರ್ವಾದ ಮಾಡಿದರು.
ಸಂಜೆ ಶರಣ ಬಸವೇಶ್ವರ ಸ್ವಾಮಿಯ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.  ಬಳಗೇರಿ ಪಂಚವಣ್ಗಿ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ರಥೋತ್ಸವಕ್ಕೆ ಚಾಲನೆ ನೀಡಿದರು. ಡೊಳ್ಳು ವಾದ್ಯ, ಭಜನಾ ಮೇಳದೊಂದಿಗೆ ಅದ್ದೂರಿ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಕೋನಾಪುರ ಗ್ರಾಮದ ಸಕಲ ಸದ್ಭಕ್ತರು, ಸಮಸ್ತರು ಭಾಗವಹಿಸಿದ್ದರು.