
ಕೋಲಾರ, ಏ. ೨೭-ಜಾತಿ ಪ್ರಮಾಣಪತ್ರದ ಪ್ರಕರಣ ನ್ಯಾಯಾಲಯಲದಲ್ಲಿ ಬಾಕಿಯಿರುವಾಗ ಕೊತ್ತೂರು ಮಂಜುನಾಥ್‌ಗೆ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಶಾಸಕನಾಗಿ ಐದು ವರ್ಷಗಳ ಅಧಿಕಾರವನ್ನು ನಡೆಸಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡ ಕೊತ್ತೂರು ಜೈಲಿಗೆ ಹೋಗುವುದು ಖಚಿತ. ಚುನಾವಣೆಯಲ್ಲಿ ಮಂಜುನಾಥ್‌ಗೆ ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸ ಬೇಕೆಂದು ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೊತ್ತೂರು ಮಂಜುನಾಥ್ ಹಿಂದುಳಿದ ವರ್ಗಗಳ ಪ್ರವರ್ಗ-೧ ಬೈರಾಗಿ ಜಾತಿಗೆ ಸೇರಿದವರಾಗಿದ್ದು, ಮೀಸಲಾತಿಯ ಮೂಲಕ ಚುನಾವಣೆಗೆ ಸ್ವರ್ಧಿಸಲು ಪರಿಶಿಷ್ಟ ಜಾತಿಯ ಬುಡ್ಗ ಜಂಗಮ ಜಾತಿಗೆ ಸೇರಿದವನೆಂದು ಅಂದಿನ ತಹಸೀಲ್ದಾರ್ ಜಯಮಾದವ ರವರನ್ನು ಅಮಿಷಕ್ಕೆ ಒಳಪಡೆಸಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ಶಾಸಕರಾಗಿದ್ದರು ಎಂದರು.
ದಲಿತರನ್ನು ತನ್ನ ಬೆಲೆ ಬಾಳುವ ಲೇಲೆಕರ್ ಶೂಗೆ ಹೋಲಿಸಿ ಅವಹೇಳನ ಮಾಡಿ ಅವಮಾನಿಸಿದ್ದಾರೆ. ಜಿಲ್ಲೆಯ ಪ್ರಭಾವಿ ಮುಖಂಡರಾದ ದಲಿತ ಜನಾಂಗದ ಕೆ.ಹೆಚ್.ಮುನಿಯಪ್ಪನವರನ್ನು ಚರಂಡಿಗೆ ಹೋಲಿಕೆ ಮಾಡಿ ಹೀಯಾಳಿಸಿರುತ್ತಾರೆ. ಇವರ ವಿರುದ್ಧ ಅಂದಿನ ಕಾಂಗ್ರೆಸ್ ಮುಖಂಡರು ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು. ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾಧಿಸಿದರು.
ಕೋಲಾರ ಕ್ಷೇತ್ರದಲ್ಲಿ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಾದ ವಿ.ಆರ್.ಸುದರ್ಶನ್, , ಬ್ಯಾಲಹಳ್ಳಿ ಗೋವಿಂದಗೌಡ, ಎಲ್.ಎ. ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಜಯರಾಮ್‌ರಂತಹ ಮುಂತಾದವರು ಸಮರ್ಥರಾಗಿದ್ದರು ಸಹ ಸ್ಥಳೀಯರನ್ನು ಬಿಟ್ಟು ಹೊರಗಿನ ಮೀಸಲಾತಿ ವಂಚಕರಾದ ಕೊತ್ತೂರು ಮಂಜುನಾಥ್‌ರವರನ್ನು ಕೋಲಾರಕ್ಕೆ ತರಬೇಕಾದ ಔಚಿತ್ಯವಾದರೂ ಏನಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯರೆಲ್ಲ ಅಸಮಾರ್ಥರೇ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ನಗರದ ಹರೀಶ್, ಹೂಹಳ್ಳಿ ನಾರಾಯಣಸ್ವಾಮಿ, ಖಾದ್ರಿಪುರ ಸುಧಾಕರ್, ಕ್ಯಾಲನೂರು ಸುರೇಶ್, ಅಪ್ಸರ್, ಬಾರಂಡಹಳ್ಳಿ ನಾರಾಯಣಸ್ವಾಮಿ, ಕಲಾ ರಮೇಶ್, ಕೊಂಡರಾಜನ ಹಳ್ಳಿ ಗ್ರಾಮ.ಪಂ, ಮಾಜಿ ಸದಸ್ಯ ಸಿರಾಜ್, ಕಠಾರಿಪಾಳ್ಯ ಅಶೋಕ್ ಇದ್ದರು.