ಕೊತ್ತನೂರು ಮಂಜುನಾಥ್‌ಗೆ ಪಾಠ ಕಲಿಸಿ

ಕೋಲಾರ,ಮೇ,೬:ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪಡೆದು ಚುನಾವಣೆಯಲ್ಲಿ ಸ್ವರ್ಧಿಸಿ ಜನತೆಗೆ ವಂಚಿಸಿ ೫ ಅಧಿಕಾರವನ್ನು ಮಜ ಊಡಾಯಿಸಿರುವ ಕೊತ್ತೂರು ಮಂಜುನಾಥ್ ಕೋಲಾರ ವಿಧಾನ ಸಭಾ ಸಾಮಾನ್ಯ ಕ್ಷೇತ್ರದಲ್ಲಿ ಸ್ವರ್ಧಿಸಿ ಇಲ್ಲಿನ ಜನತೆಗೆ ವಂಚಿಸಲು ಮುಂದಾಗಿರುವಂತ ಕ್ರಿಮಿನಲ್ ಅಗಿದ್ದು ಅವರನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸ ಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗು ಜೆ.ಡಿ.ಎಸ್. ಮುಖಂಡ ಬಾಲಾಜಿ ಚೆನ್ನಯ್ಯ ಕರೆ ನೀಡಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕೊತ್ತೂರು ಮಂಜುನಾಥ್ ಅವರ ನಕಲಿ ಜಾತಿ ಪ್ರಮಾಣ ಪತ್ರವೆಂದು ಈಗಾಗಲೇ ನ್ಯಾಯಾಲಯದಲ್ಲಿ ತೀರ್ಪು ನೀಡಿದೆ. ಅವರು ಬೈರಾಗಿ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ ಅವರು ಶಾಸಕರಾಗಿ ಅಧಿಕಾರ ಪಡೆಯಲು ಬುಡ್ಗಜಂಗಮದವರೆಂದು ತಹಸೀಲ್ದಾರ್ ಅವರನ್ನು ಹಣದ ಅಮಿಷಕ್ಕೆ ಒಳಪಡೆಸಿ ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆದು ಚುನಾವಣೆಯಲ್ಲಿ ಹಣ ಬಲದ ಮೂಲಕ ಆಯ್ಕೆಯಾಗಿ ಅಧಿಕಾರವನ್ನು ದುರ್‍ಬಳಿಸಿ ಕೊಂಡಿದ್ದಾರೆ ಎಂದು ಅರೋಪಿಸಿದರು,
ಕಳೆದ ೨೦೧೩ರಲ್ಲಿ ಅವರು ಮುಳಬಾಗಿಲು ಕ್ಷೇತ್ರದಲ್ಲಿ ತಹಸೀಲ್ದಾರ್ ಅವರಿಗೆ ೨೫ ಲಕ್ಷರೂ ಲಂಚ ನೀಡಿ ನಕಲಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ವರ್ಧಿಸಿದಾಗ ಅನೇಕ ಮುಖಂಡರು ಅಕ್ಷೇಪಿಸಿದರು ಸಹ ನ್ಯಾಯಾಲಯದ ಮೂಲಕ ತಡೆಯಾಜ್ಞೆಯನ್ನು ತಂದು ೫ ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಿದರು, ನ್ಯಾಯಾಲಯದಲ್ಲಿ ಈ ಸಂಬಂಧವಾಗಿ ವಿಚಾರಣೆ ನಡೆದು ೨೦೧೮ರ ಏಪ್ರಿಲ್ ಮಾಹೆ ೨೫ ರಂದು ಕೊತ್ತೂರು ಮಂಜುನಾಥ್ ಅವರು ಪಡೆದಿರುವುದು ನಕಲಿ ಜಾತಿ ಪತ್ರವೆಂದು ೫ ವರ್ಷಗಳಿಂದ ಶಾಸಕನಾಗಿ ಪಡೆದಿದ್ದ ಸರ್ಕಾರದ ಸೌಲತ್ತುಗಳನ್ನು ಹಾಗೂ ವೆಚ್ಚಗಳನ್ನು ಸರ್ಕಾರಕ್ಕೆ ವಾಪಾಸ್ಸ ನೀಡಲು ನ್ಯಾಯಾಲಯವು ಅದೇಶಿಸಿತ್ತು ಎಂದರು,
ಅದರೆ ಹೈಕೋರ್ಟ್ ತೀರ್ಪಿನ ವಿರುದ್ದವಾಗಿ ಕೊತ್ತೂರು ಮಂಜುನಾಥ್ ಅವರು ದೆಹಲಿಯ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು ಅಲ್ಲೂ ಸಹ ನ್ಯಾಯಾಲಯವು ಹೈಕೋರ್ಟಿನ ತೀರ್ಪನ್ನು ಎತ್ತಿ ಹಿಡಿದಿದೆ. ಜಿಲ್ಲಾಧಿಕಾರಿಯಾಗಿದ್ದ ಸೆಲ್ವಮಣಿ ಅವರಿಗೆ ಜಾತಿ ಪ್ರಮಾಣದ ಬಗ್ಗೆ ವಿಸೃತ ವರದಿ ಸಲ್ಲಿಸಲು ಸೂಚಿಸಿದಾಗ ಅವರು ಖುದ್ದಾಗಿ ಪರಿಶೀಲಿಸಿ ಸರ್ಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದರು ಆಗಲೂ ಸಹ ಕೊತ್ತೂರು ಮಂಜುನಾಥ್ ಅವರು ದ್ವಿಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕುರುಬ ಸಂಘದ ಮುಖಂಡ ಜೆಟ್ ಅಶೋಕ್, ದಲಿತ ಮುಖಂಡ ವಿ.ಹರೀಶ್, ಕಠಾರಿಪಾಳ್ಯ ಅಶೋಕ್, ಮತ್ತಿಕುಂಟೆ ನಾರಾಯಣಸ್ವಾಮಿ, ಹೊವಳ್ಳಿ ನಾರಾಯಣಸ್ವಾಮಿ, ಜಯಚಂದ್ರ, ಶಿವು, ವೇಣುಗೋಪಾಲ್, ರೋಜಾ ಉಪಸ್ಥಿತರಿದ್ದರು,