ಕೊತ್ತದೊಡ್ಡಿ ಗ್ರಾ.ಪಂ.ಅವ್ಯವಹಾರ-ಕ್ರಮಕ್ಕೆ ಆಗ್ರಹ

ಗಬ್ಬೂರು.ಮಾ.೨೩-ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯತಿಯಲ್ಲಿ ೨೦೧೯-೨೦ನೇ ಸಾಲಿನ ೧೪ಮತ್ತು ೧೫ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ, ಘನತಾಜ್ಯ ಮತ್ತು ಬೀದಿ ದಿಪಗಳ ಕಾಮಗಾರಿಗಳಲ್ಲಿ ಖರೀದಿ ಮಾಡದೆ ಅನುದಾನವನ್ನು ದುರ್ಬಳಕೆ ಮಾಡಿರುವುದನ್ನು ಖಂಡಿಸಿ. ತಕ್ಷಣದಲ್ಲಿ ತನಿಖೆಗೆ ತಂಡ ರಚನೆ ಮಾಡಿ, ಆರೋಪಿತ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಂಜನೇಯ ಕಾಟಮಳ್ಳಿ ಇವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ೧೪ಮತ್ತು೧೫ನೇ ಹಣಕಾಸು ಪಂಚವಾರ್ಷಿಕ ಯೋಜನೆಯಡಿ ಸಾಲಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಗ್ರಾಮ ಪಂಚಾಯತಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಇವರು ಸರ್ಕಾರದ ಬೊಕ್ಕಸಗಳನ್ನು ಲೂಟಿ ಮಾಡಿದ್ದಾನೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
೨೦೧೯-೨೦ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವಾರು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಭಿವೃದ್ಧಿ ಅಧಿಕಾರಿಯಾದ ಭೀಮರಾಯ ಇವರು ಕೊತ್ತದೊಡ್ಡಿ ಪಂಚಾಯಿತಿಯಲ್ಲಿ ಯಾವುದೇ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾನೆ ಎಂದು ಸಾಮಾಜಿಕ ಕಾರ್ಯಾಕರ್ತ ಆಂಜನೇಯ ಕಾಟಮಳ್ಳಿ ಅವರು ಆಗ್ರಹಿಸಿದರು.