ಕೊತ್ತದೊಡ್ಡಿ ಗ್ರಾಪಂನಲ್ಲಿ ಕೊರೋನಾ ಜಾಗೃತಿ ಸಭೆ

ಗಬ್ಬೂರು.ಮೇ.೨೯-ಯಾವುದೇ ವ್ಯಕ್ತಿಗೂ ಕೊರೋನಾ ಲಕ್ಷಣಗಳು ಗೋಚರಿಸಿದ ಕೂಡಲೇ ಖಾಸಗಿ ಆಸ್ಪತ್ರೆ ಹೋಗುವ ಮುಂಚೆ ಸರಕಾರಿ ಆಸ್ಪತ್ರೆ ಬೇಡಿ ನೀಡಿ ಪರೀಕ್ಷೆ ಮಾಡಿಕೊಂಡು ಸರಿಯಾದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಶೋಕ ಹೇಳಿದರು.
ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಪಂ ಕಾರ್ಯಲದಲ್ಲಿ ನಡೆದ ಕೊರೋನಾ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕೊರೋನಾ ಮಾಹಾಮಾರಿ ವೇಗವಾಗಿ ಹರಡುತ್ತಿದ್ದು, ಇದರ ನಿಯಂತ್ರಣ ನಿಟ್ಟಿನಲ್ಲಿ ಸೋಂಕಿತರು ಮನೆಯಿಂದ ಯಾವುದೇ ಕಾರಣಕ್ಕೆ ಹೊರಬಾರದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಆದಷ್ಟು ಬೇಗನೆ ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಬೇಕಾಗಿದೆ.
ಗ್ರಾಮದ ಯುವಕರು ಹಾಗೂ ಹಿರಿಯರು ನಿಯಮಗಳನ್ನು ಸರಿಯಾದ ರೀತಿ ಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿದೆ ಗ್ರಾಮಸ್ಥರು ಗಂಭೀರವಾಗಿ ಪರಿಗಣಿಸಿ, ಸಾಮಾಜಿಕ ಅಂತರ ಪಾಲನೆ, ಸ್ವಚ್ಛತೆ ಕಾಪಾಡಲು ಗ್ರಾಮಸ್ಥರು ಮುಂದಾಗಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯ ಆಂಜನೇಯ ನಾಯಕ ಕಾಟಮಳ್ಳಿ ಮಾತನಾಡಿ, ಪ್ರಸ್ತುತ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಜನರು ಮಾತ್ರ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾರೆ.
ಅವರಿಗೆ ಯಾರ ಭಯವೂ ಇಲ್ಲ,ಕೊರೋನಾ ಸೋಂಕಿತರನ್ನು ಇಷ್ಟು ದಿನಗಳ ಕಾಲ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೀಗ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿದೆ.ಕೊರೋನಾ ಸೋಂಕನ್ನು ತಗುಲಿದವರು ಆ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕಿದೆ. ಹಳ್ಳಗಳಲ್ಲಿ ಸೋಂಕಿತರು ಮತ್ತು ಅವರ ಸಂಪರ್ಕಿತರು ಅನಾವಶ್ಯಕವಾಗಿ ಗ್ರಾಮಗಳಲ್ಲಿ ತಿರುಗಾಡುತ್ತಿದ್ದು,ಇದರಿಂದ ರೋಗ ಹೆಚ್ಚಾಗಲು ಕಾರಣವಾಗಿದೆ.ಹೀಗಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ.ರೋಗ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು. ಈ ವೇಳೆ ಗ್ರಾಪಂ ಅಧ್ಯಕ್ಷ ಹನುಮಂತ್ರಾಯ, ವೈದ್ಯದಿಕಾರಿ ಶಂಕರ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಈರಡಿ, ಹಂಪಯ್ಯ ನಾಯಕ,ರಮೇಶ ಮೇಟಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೇಂದ್ರದ ಸಿಬ್ಬಂದಿಗಳು ಮತ್ತು ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.