
ಚಿಂಚೋಳಿ,ಮೆ.25- ತಾಲೂಕಿನ ತೆಲಂಗಾಣದ ಗಡಿ ಭಾಗವಾದ ತೆಲಂಗಾಣಕ್ಕೆ ಸೇರಿದ ಕೊತಲಾಪೂರ ಗ್ರಾಮದಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ರಾಜ್ಯಗಳ ಸಾವಿರಾರು ಜನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರೇಣುಕಾ ಎಲ್ಲಮ್ಮ ದೇವರ ದರ್ಶನವನ್ನು ಪಡೆದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೇ 5ರಿಂದ ಒಂದು ತಿಂಗಳವರೆಗೆ ಮಂಗಳವಾರ ಮತ್ತು ಶುಕ್ರವಾರ ದೇವಿಯ ದರ್ಶನ ಮಾಡಲು ಬಹುಸಂಖ್ಯೆಯಲ್ಲಿ ಬರುತ್ತಾರೆ. ಇದೇ ತಿಂಗಳು 19ನೇ ತಾರೀಖು ರಂದು ರೇಣುಕಾ ಎಲ್ಲಮ್ಮ ಜಾತ್ರಾಂಗವಾಗಿ ದೇವಾಲಯ ಅವನತಲೆ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಈ ರಥೋತ್ಸವ ದಲ್ಲಿ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು ಮತ್ತು ಕಾರುಣ್ಣಿಮೆಗೆ ಶ್ರೀ ರೇಣುಕಾ ಎಲ್ಲಮ್ಮ ದೇವರ ಕೊನೆ ವಾರ ಇದೆ ಎಂದು ಕೊತಲಾಪುರ ರೇಣುಕಾ ಎಲ್ಲಮ್ಮ ದೇವಾಲಯ ಕಮಿಟಿ ಅಧ್ಯಕ್ಷರಾದ ಸಂದೀಪ್ ರೆಡ್ಡಿ, ಮತ್ತು ದೇವಾಲಯ ಅರ್ಚಕರಾದ ಶ್ರೀನಿವಾಸ್ ಅವರು ತಿಳಿಸಿದ್ದಾರೆ..