ಕೊತಲಾಪುರ ದೇವಿ ದರ್ಶನಕ್ಕೆ ತಡೆ

ಚಿಂಚೋಳಿ,ಏ.25- ಕೋವಿಡ್-19 ಎರಡನೆ ಅಲೆಯ ಹಿನ್ನಲೆಯಲ್ಲಿ ತಾಲೂಕಿನ ತೆಲಂಗಾಣ ಗಡಿಭಾಗದಲ್ಲಿರುವ ಕೊತಲಾಪುರ ಗ್ರಾಮದ ಶ್ರೀರೇಣುಕಾ ಎಲ್ಲಮ್ಮ ದೇವಸ್ಥಾನದ ಧರ್ಶನಕ್ಕೆ ತೆಲಂಗಾಣ ಸರ್ಕಾರ ನಿರ್ಭಂದ ಏರಿದೆ.
ಕೋವಿಡ್ 19 ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯ ಸರ್ಕಾರವು ಇಂದಿನಿಂದ ಏ.25ರಿಂದ ದೇವಿಯ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.
ಇಲ್ಲಿನ ಸುಪ್ರಸಿದ್ದ ದೇವಾಲಯಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ್ ಹಾಗೂ ಮಹಾರಾಷ್ಟ್ರ ಸೇರಿದಂತೆ ಸುತ್ತಲಿನ ರಾಜ್ಯಗಳಿಂದ ಅಪಾರ ಸಂಖ್ಯೆಗಳಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುವುದನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ವರ್ಷ ಭಕ್ತರು ತಮ್ಮ ಮನೆಗಳಲ್ಲಿಯೇ ಇದ್ದುಕೊಂಡು ದೇವಿಯ ಸ್ಮರಣೆ ಕೈಗೊಂಡು ಪೂಜೆಪುನಸ್ಕಾರಗಳನ್ನು ಮಾಡುವಂತೆ ದೇವಸ್ಥಾನ ಸಮಿತಿ ಸಿಳಿಸಿದೆ. ಯಾವುದೇ ಕಾರಣಕ್ಕೂ ಭಕ್ತರು ದೇವಿಯ ಧರ್ಶನಕ್ಕೆ ಬರಬಾರದೆಂದು ಪ್ರಕಟಣೆಯಲ್ಲಿ ಕೋರಿದೆ.