
ಗುರುಮಠಕಲ:ಮೇ.10:ವೀರಶೈವ ಲಿಂಗಾಯತ ಸಮಾಜ ಗುರುಮಠಕಲ ವತಿಯಿಂದ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ 601ನೇಯ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಶ್ರೀ ವೀರಸೋಮೇಶ್ವರ ಕೊಡ್ಲಿಮಠದ ಆವರಣದಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ವೀರಸೋಮೇಶ್ವರ ಕೊಡ್ಲಿಮಠ ಅಧ್ಯಕ್ಷರು ಶ್ರೀ ಭೀಮಾಶಂಕರ ಮುತ್ತಗಿ ಮಾತನಾಡಿ ತಾಳ್ಮೆ, ಸಹನೆಯ ಸ್ಫೂರ್ತಿಯಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಾವಿರಾರು ಸಮಸ್ಯೆಗಳನ್ನು
ಎದುರಿಸಿ ಬದುಕುವುದೇ ನಿಜವಾದ ಬದುಕು ಎಂಬುದನ್ನು ಈ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.ಶ್ರೀ ಮಲ್ಲಿಕಾರ್ಜುನ ಹಿರೇಮಠ ಸಮಾಜ ಮುಖಂಡರು ಎಲ್ಲರಿಗೂ ಶುಭಾಶಯ ಕೋರಿದರು,ಶ್ರೀ ಅಶೋಕ್ ಮುತ್ತಗಿ,ವಿಜಯ್ ಹಿರೇಮಠ,ಆನಂದ್ ಶೇಖರ್ ಹಿರೇಮಠ, ಬಾಬು ತಂಡುರಕರ್, ಜಗದೀಶ ಕುಮಾರ್ ಭೂಮ, ರಾಜಲಿಂಗಪ್ಪ ಸಜ್ಜನ್ ಚಂಡರಿಕಿ ಹಾಜರಿದ್ದರು.