ಕೊಡ್ಲಾದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ

ಸೇಡಂ,ಮಾ,27:ತಾಲ್ಲೂಕಿನ ಕೊಡ್ಲಾ ಗ್ರಾಮದ ಗಣಪತಿ ಮಂದಿರದಲ್ಲಿ ಹೈದ್ರಾಬಾದ ಕರ್ನಾಟಕ ಬೇಡಜಂಗಮ ಸಮಾಜ ಸಂಸ್ಥೆಯ ಯುವ ಘಟಕದ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಿದರು.ಈ ವೇಳೆಯಲ್ಲಿ ನೇತಾಜಿ ಸ್ವಾಮಿ ಪ್ರಚಂಡಿ ಮತ್ತು ಶಿವಲಿಂಗಯ್ಯ ಸ್ವಾಮಿ ಗಚ್ಚಿನಮಠ ಮಾತನಾಡಿದರು. ಕಾರ್ಯಕ್ರಮ ಉದ್ದೇಶಿಸಿ ಹೈದ್ರಾಬಾದ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆಯ(ರಿ) ಯುವ ಘಟಕದ ತಾಲೂಕಾಧ್ಯಕ್ಷರಾದ ಶರಣಯ್ಯ ಮಠಪತಿ ಸಿಂಧನಮಡು ಮಾತನಾಡಿದ ಅವರು
ವಿಶ್ವದ ಅತ್ಯಂತ ಪ್ರಾಚೀನ ವಾದ ಒಂದು ವಿಶಿಷ್ಟಧರ್ಮ ವೀರಶೈವ ಲಿಂಗಾಯತ ಧರ್ಮ ಏಕದೇವೋಪಾಸನೆ ಮತ್ತು ವಿಶ್ವ ಶಾಂತಿ ಸ್ಥಾಪನೆಗೆ ಈ ಧರ್ಮದ ಅಂತರಂಗ-ಬಹಿರಂಗ ವೀರಶೈವ ಲಿಂಗಾಯತ ಧರ್ಮದ ಮೂರು ಸಿದ್ದಾಂತಗಳು
ಷಟ್ಟಸ್ಥಳ, ಅಷ್ಟಾವರ್ಣ, ಮತ್ತು ಪಂಚಾಚಾರ ಕಾಯಕ, ಮತ್ತು ದಾಸೋಹ ತತ್ವಗಳನ್ನ ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ಸಾರಿದ ಲೋಕದರ್ಮ ವೀರಶೈವ ಲಿಂಗಾಯತ ಧರ್ಮ ಈ ಧರ್ಮವನ್ನು ರೇಣುಕಾ ಪಂಚಾಚಾರ್ಯರು ಬಸವಾದಿ ಶಿವಶರಣರು ನೂರೊಂದು ವೀರಕ್ತರು ಮತ್ತು ಸಹಸ್ರಾರು ಹರ ಗುರು ಚರಮೂರ್ತಿಗಳು ಸಂರಕ್ಷಣೆ ಮತ್ತು ಸಂವರ್ಧನೆಗೆ ಕಾರಣರಾಗಿದ್ದಾರೆ.ಈ ಪ್ರಾಚೀನ ಪರಂಪರೆಗೆ ಪ್ರಗತಿಶೀಲತೆಯ ಸಂಸ್ಕಾರ ನೀಡಿ ಮಾನವ ಘನತೆಗೆ ಒತ್ತುಕೊಟ್ಟು. ಧರ್ಮದ ಹೊಸ ಬೆಳಕನ್ನು ಹಿಡಿದವರು 12ನೇ ಶತಮಾನದ ಬಸವಾದಿ ಶರಣರು ವೀರಶೈವ ಲಿಂಗಾಯತ ಧರ್ಮ ವರ್ಗ ವರ್ಣ ವೃತ್ತಿ ವಯಸ್ಸು ಲಿಂಗಭೇದಗಳನ್ನು ಪರಿಗಣಿಸುವುದಿಲ್ಲ .ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಉದಾತ್ತ ಆಸೆಯ ಹೊಂದಿರುವ ಈ ಪರಂಪರೆಯ ಸಮುದಾಯಕ್ಕೆ ದಯವೇ ಧರ್ಮದ ಮೂಲ ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಭಾವ ವೀರಶೈವ ಲಿಂಗಾಯತ ಧರ್ಮ ಶಿವಯೋಗ ಸಿದ್ಧಾಂತದ ಧರ್ಮ. ಬಸವಾದಿ ಶರಣರು ನಡೆಸಿ ಕೊಂಡು ಬಂದಂತಹ ಧರ್ಮ ವಾಗಿದ್ದು ಅದನ್ನು ಮುಂದೆ ಒಯ್ಯುವ ಜವಾಬ್ದಾರಿ ಇಂದಿನ ಸಮಾಜದ ಕರ್ತವ್ಯವಾಗಿದೆ ಎಂದರು . ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಯ್ಯ ಮಠಪತಿ ಬೆನಕನಹಳ್ಳಿ. ಜಂಟಿ ಕಾರ್ಯದರ್ಶಿ ಶರಣಯ್ಯ ಸ್ವಾಮಿ ಕಪುರ. ಚನ್ನಯ್ಯ ಸ್ಥಾವರಮಠ ಬೆನಕನಹಳ್ಳಿ.ರೇವನಸಿದ್ದಯ್ಯ ಸ್ವಾಮಿ ಕಪುರ. ಶ್ರೀಮಂತ ಅರಳಿ. ಮಲ್ಲು ಅವoಟಿ.ಮಾಣಿಕ ಸೌಕಾರ.ಆನಂದ ಸಣ್ಣೂರ
ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ವರದಸ್ವಾಮಿ, ಶಿವಕುಮಾರರೆಡ್ಡಿ ರಾಜು ಸ್ವಾಮಿ ವಿರೂಪಾಕ್ಷರೆಡ್ಡಿ ಹಳಿಮನಿ ನಾರಾಯಣರೆಡ್ಡಿ ಹಳಿಮನಿ ಸದಾಶಿವ ಸ್ವಾಮಿ ಕಪುರ ಕೊಡ್ಲಾ ಗ್ರಾಮದ ಹಿರಿಯರು ಯುವಕರು ಇನ್ನಿತರರಿದ್ದರು.