
ಬಳ್ಳಾರಿ: ಈ ಚುನಾವಣೆಯಲ್ಲಿ ಹಲವು ಉಚಿತ ಯೋಜನೆಗಳ ಬಗ್ಗೆ ಗ್ಯಾರೆಂಟಿ ಕೊಡುತ್ತಿದೆ. ಅವು ಗ್ಯಾರೆಂಟಿ ಕಾರ್ಡ್ ಅಲ್ಲ. ಬೋಗಸ್ ಕಾರ್ಡ್ , ಕಾಂಗ್ರೆಸ್ ಅಧಿಕಾರದಲ್ಲಿರುವ ಇತರೇ ರಾಜ್ಯಗಳಿಲ್ಲ ಇರದ ಗ್ಯಾರೆಂಟಿ ಇಲ್ಲಿ ಏಕೆ ಎಂದು ಪ್ರಶ್ನಿಸಿ. ಗೆದ್ದ ಮೇಲೆ ಕಾಂಗ್ರೆಸ್ ಹೇಳಲಿದೆ ಕೊಡ್ತೀನಿ, ಕೊಡುಸ್ತೀನಿ, ಕೊಡ್ಸೋಣ ಎಂದು ಗೇಲಿ ಮಾಡಿದರು.
ಅವರು ಇಂದು ನಗರದಲ್ಲಿ ರೋಡ್ ಶೋ ನಡೆಸಿ ಬ್ರೂದ್ ಪೇಟೆ ಸರ್ಕಲ್ ನಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ನಿನ್ಮೆ ರಾಹುಲ್ ಗಾಂಧಿ ಅವರು ಇಲ್ಲಿ ರೋಡ್ ಶೋ ಮಾಡಿ ಜೀನ್ಸ್ ಪಾರ್ಕ್ ಮಾಡ್ತೀವಿ ಎಂದಿದ್ದೀರಿ, ನಿಮ್ಮ ತಾಯಿ ಸೋನಿಯಾ ಗಾಂಧಿ ಇಲ್ಲಿ ಎಂ.ಪಿ.ಆಗಿದ್ದಾಗ ಕೊಟ್ಟ 3300 ಕೋಟಿ ರೂ ಪ್ಯಾಕೇಜ್ ಏನಾಯ್ತು ಎಂದ ಮುಖ್ಯ ಮಂತ್ರಿಗಳು. ಈಗಾಗಲೇ ಬಜೆಟ್ ನಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಗೆ 50 ಕೋಟಿ ರೂ ಇಟ್ಟಿದೆ. ಹಾಗಾಗಿ ನಿಮ್ಮ ಆಶ್ವಾಸನೆಯ ಅವಶ್ಯಕತೆ ಬಳ್ಳಾರಿ ಜನತೆಗೆ ಇಲ್ಲ ಎಂದು ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದರು.
ಜನ ಮತ್ತು ಹಣದ ನಡುವೆ ಇಲ್ಲಿ ಚುನಾವಣೆ ನಡೆಯಲಿದೆ. ಯಾವಾಗಲೂ ಜನ ಬಲವೇ ಗೆದ್ದಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ವಳ ಅನುಷ್ಟಾನಕ್ಕೆ ಬಿಜೆಪಿಯನ್ನು ಅ ಧಿಕಾರಕ್ಕೆ ತರಬೇಕು. ಇಲ್ಲದಿದ್ದರೆ ಮೀಸಲಾತಿ ಹೆಚ್ಚಳವನ್ನು ಕಿತ್ತಿ ಹಾಕುವುದಾಗಿ ಕಾಂಗ್ರೆಸ್ ಹೇಳುತ್ತಿದೆ ಜನತೆ ಇದನ್ನರಿತು ಎಚ್ಚರಿಕೆಯಿಂದ ಮತ ನೀಡಿ ಎಂದರು.
ಗಣಿಗಾರಿಕೆಯ ಶುಲ್ಕದ ಕೆಎಂಆರ್ ಸಿಯ 25 ಸಾವಿರ ಕೋಟಿ ರೂ ಫಂಡ್ ನ್ನು ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ಬಳಕೆ ಮಾಡಲು ಕ್ರಮ ತೆಗೆದುಕೊಂಡಿದೆ. ಬರುವ ಒಂದು ವರ್ಷದಲ್ಲಿ ಬಳ್ಳಾರಿ ವಿಮಾನನಿಲ್ದಾಣ ಮುಗಿಸಲಿದೆಂದರು.
ಬಳ್ಳಾರಿ ಚುನಾವಣೆ ಮಹತ್ವದ್ದಾಗಿದೆ. ಕಳೆದ 23 ವರ್ಷದಿಂದ ಸೋಮಶೇಖರ ರೆಡ್ಡಿ ನಿಮ್ಮ ಸೇವೆ ಮಾಡುತ್ತಾ ಬಂದಿದ್ದಾರೆ.
ಬಳ್ಳಾರಿ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದು. ಆಂಜನೇಯನ ಭಕ್ತ ಆತ. ಅಯೋದ್ಯದಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಕರ್ನಾಟಕದಲ್ಲಿ ರಾಮನ ಭಕ್ತ ಆಂಜನೇಯನ ಜನ್ಮ ಸ್ಥಳ ಅಭಿವೃದ್ಧಿಯಾಗಬೇಕೆಂದ. ಅದಕ್ಕಾಗಿ
120 ಕೋಟಿ ರೂ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಮಾಡಲಿದೆ. ಅದರ ಶ್ರೇಯಸ್ಸು ಸೋಮಶೇಖರ ರೆಡ್ಡಿಗೆ ಸೇರುತ್ತದೆಂದರು.
ಯಾರು ಅವರ ವಿರುದ್ದ ಸ್ಪರ್ಧೆ ಮಾಡಿದ್ದಾರೆ. ಯಾರಿಂದ ಅಭಿವೃದ್ಧಿ ಸಾಧ್ಯ. ಎಂಬುದು ನಿಮಗೆ ಗೊತ್ತಿದೆ.
ಕೆಲವರು ಗೆಲ್ಲಲು, ಕೆಲವರು ಮತ್ತೊಬ್ಬರನ್ನು ಸೋಲಿಸಲು ನಿಂತಿದ್ದಾರೆ. ಇನ್ನೊಬ್ಬರನ್ನು ಸೋಲಿಸುವವರು ಎಂದೂ ಉದ್ದಾರ ಆಗಲ್ಲ ಎಂದರು.
ರಾಜ್ಯ ರೈಲ್ವೇ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಬೊಮ್ಮಾಯಿ ನೇತೃತ್ವದಲ್ಲಿ ಈ ಸಂದರ್ಭದಲ್ಲಿ ಬಿಜೆಪಿ ಸೇರಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ಗೌಡ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ , ಸಂಸದ ವೈ.ದೇವೇಂದ್ರಪ್ಪ ಮೊದಲಾದವರು ಇದ್ದರು.